alex Certify ಪದವೀಧರೆಯಾಗುವ ಸಂಭ್ರಮದಲ್ಲಿ ಸಮರ್ಸಾಲ್ಟ್‌ ಮಾಡಿದ ವಿದ್ಯಾರ್ಥಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದವೀಧರೆಯಾಗುವ ಸಂಭ್ರಮದಲ್ಲಿ ಸಮರ್ಸಾಲ್ಟ್‌ ಮಾಡಿದ ವಿದ್ಯಾರ್ಥಿನಿ

ಪದವೀಧರೆಯಾದ ಸಂಭ್ರಮದಲ್ಲಿ ಚೀನೀ ವಿದ್ಯಾರ್ಥಿನಿಯೊಬ್ಬಳು ಸಮರ್ಸಾಲ್ಟ್‌ ಮಾಡಿ ಖುಷಿ ವ್ಯಕ್ತ ಪಡಿಸಿದ ಘಟನೆ ಇಂಗ್ಲೆಂಡ್‌ನ ರೋಹಂಪ್ಟನ್ ವಿವಿಯಲ್ಲಿ ಜರುಗಿದೆ.

ಚೆನ್ ಯಿನಿಂಗ್ ಹೆಸರಿನ 24 ವರ್ಷ ವಯಸ್ಸಿನ ಈ ವಿದ್ಯಾರ್ಥಿನಿ ನೃತ್ಯಾಭ್ಯಾಸದಲ್ಲಿ ಸ್ನಾತಕೋತ್ತರ ಡಿಗ್ರೀ ಪಡೆದ ಸಂಭ್ರಮದಲ್ಲಿ, ಇನ್ನೇನು ಡಿಗ್ರೀ ಪ್ರಮಾಣಪತ್ರ ಪಡೆಯಬೇಕೆನ್ನುವಷ್ಟರಲ್ಲಿ ಸಮರ್ಸಾಲ್ಟ್‌ ಮಾಡಿದ್ದಾಳೆ.

ಯೂಟ್ಯೂಬ್‌ನಲ್ಲಿ ಬೀಜಿಂಗ್‌ ನ್ಯೂಸ್ ಬಿತ್ತರಿಸಿದ ಈ ಕ್ಲಿಪ್‌ನಲ್ಲಿ ಪದವೀಧರೆಯಾಗುವ ಮುನ್ನ ಗೌನ್ ಧರಿಸಿಕೊಂಡು ಬಂದ ಈಕೆ ಜನಜಂಗುಳಿಯತ್ತ ಕೈಬೀಸುತ್ತಿರುವುದನ್ನು ನೋಡಬಹುದಾಗಿದೆ. ಪದವಿ ಪತ್ರ ಪಡೆಯಲು ಹೋಗುತ್ತಿದ್ದ ಈಕೆಯನ್ನು ವ್ಯಕ್ತಿಯೊಬ್ಬರು ಕರೆಯುತ್ತಲೇ ಮುಮ್ಮುಖವಾಗಿ ಜಿಗಿದು ಬದಿಗೆ ಫ್ಲಿಪ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಚೆನ್‌ಳ ಈ ಅಮೋಘ ಸಮರ್ಸಾಲ್ಟ್‌ ಕಂಡು ದಂಗುಬಡಿದ ಜನಜಂಗುಳಿ ಭಾರೀ ಕರತಾಡನದೊಂದಿಗೆ ಆಕೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಬೀಜಿಂಗ್ ನೃತ್ಯ ಅಕಾಡೆಮಿಯಲ್ಲಿ ದಿನಗಳಲ್ಲಿ ವೃತ್ತಿಪರ ನೃತ್ಯಗಾತಿಯೆಂಬ ಪ್ರಮಾಣ ಪತ್ರವನ್ನು ಪಡೆದ ಈ ಯುವತಿ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ಪಡೆಯಲಿದ್ದ ಸಂಭ್ರಮದಲ್ಲಿ ಹಾಗೆ ಸಮರ್ಸಾಲ್ಟ್‌ ಮಾಡಿದ್ದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...