alex Certify ವಿವಾಹೇತರ ಸಂಬಂಧ ಹೊಂದಿದ್ದರೆ ಉದ್ಯೋಗದಿಂದ ವಜಾ; ಚೀನಾ ಕಂಪನಿಯ ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹೇತರ ಸಂಬಂಧ ಹೊಂದಿದ್ದರೆ ಉದ್ಯೋಗದಿಂದ ವಜಾ; ಚೀನಾ ಕಂಪನಿಯ ಮಹತ್ವದ ಕ್ರಮ

ವಿವಾಹಿತ ಉದ್ಯೋಗಿಗಳು ತಮ್ಮ ಸಂಗಾತಿಗೆ ಮೋಸ ಮಾಡುವುದು ಕಂಡುಬಂದರೆ ಅವರನ್ನು ಕೆಲಸದಿಂದ ವಜಾಗೊಳಿಸುವ ಹೊಸ ನಿಯಮವನ್ನು ಚೀನಾ ಹೊರಡಿಸಿದೆ. ಝೆಜಿಯಾಂಗ್ ಮೂಲದ ಕಂಪನಿಯು ‘ವಿವಾಹೇತರ ಸಂಬಂಧ ನಿಷೇಧ’ ಆದೇಶವನ್ನು ಹೊರಡಿಸಿದೆ.

‘ಕಂಪನಿಯ ಆಂತರಿಕ ನಿರ್ವಹಣೆಯನ್ನು ಬಲಪಡಿಸಲು, ಕುಟುಂಬಕ್ಕೆ ನಿಷ್ಠರಾಗಿರುವ ಕಾರ್ಪೊರೇಟ್ ಸಂಸ್ಕೃತಿಯನ್ನು ಪ್ರತಿಪಾದಿಸಲು ಮತ್ತು ಗಂಡ – ಹೆಂಡತಿಯ ನಡುವೆ ಪ್ರೀತಿ, ಕುಟುಂಬವನ್ನು ಉತ್ತಮವಾಗಿ ರಕ್ಷಿಸಲು ಮತ್ತು ಕೆಲಸದ ಮೇಲೆ ಕೇಂದ್ರೀಕರಿಸಲು, ಎಲ್ಲಾ ವಿವಾಹಿತ ಉದ್ಯೋಗಿಗಳಿಗೆ ವಿವಾಹೇತರ ಸಂಬಂಧ ಅಥವಾ ಪ್ರೇಯಸಿಯನ್ನು ಇಟ್ಟುಕೊಳ್ಳುವಂತಹ ಕೆಟ್ಟ ನಡವಳಿಕೆಗಳನ್ನು ನಿರ್ಬಂಧಿಸಲಾಗಿದೆ’ ಎಂದು ಕಂಪನಿ ಹೇಳಿದೆ.

‘ಅಕ್ರಮ ಸಂಬಂಧವಿಲ್ಲ, ಪ್ರೇಯಸಿ ಇಲ್ಲ, ವಿವಾಹೇತರ ಸಂಬಂಧವಿಲ್ಲ ಮತ್ತು ವಿಚ್ಛೇದನವಿಲ್ಲ! ಈ ಷರತ್ತುಗಳನ್ನು ಯಾರಾದರೂ ಉಲ್ಲಂಘಿಸಿದಲ್ಲಿ ಅವರನ್ನು ವಜಾಗೊಳಿಸಲಾಗುತ್ತದೆ ಎನ್ನುವುದು ಈ ನಿಯಮ.

‘ಮದುವೆಯಲ್ಲಿ ಸಂಗಾತಿಗೆ ಮೋಸ ಮಾಡುವುದು ಬಹುಶಃ ತುಂಬಾ ಸಾಮಾನ್ಯವಾಗಿದೆ. ಈಗ ಕಂಪನಿಯೊಂದು ಈ ಕೆಟ್ಟ ನಡವಳಿಕೆಯ ವಿರುದ್ಧ ಹೋರಾಡಲು ಉಪಕ್ರಮವನ್ನು ತೆಗೆದುಕೊಂಡಿದೆ. ಇದು ಸಮಾಜಕ್ಕೆ ಸಕಾರಾತ್ಮಕ ಶಕ್ತಿಯಾಗಿದ್ದು, ಕಂಪನಿಯು ನಮ್ಮ ಗೌರವಕ್ಕೆ ಅರ್ಹವಾಗಿದೆ’ ಎಂದು ಹಲವರು ಹೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...