alex Certify ಚೀನಾದಲ್ಲಿ ಮತ್ತೆ ಕೊರೊನಾ ನರ್ತನ ಆರಂಭ; ಚಿಂತೆಯಲ್ಲಿ ಮುಳುಗಿದೆ ಡ್ರ್ಯಾಗನ್​ ರಾಷ್ಟ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದಲ್ಲಿ ಮತ್ತೆ ಕೊರೊನಾ ನರ್ತನ ಆರಂಭ; ಚಿಂತೆಯಲ್ಲಿ ಮುಳುಗಿದೆ ಡ್ರ್ಯಾಗನ್​ ರಾಷ್ಟ್ರ….!

ಚೀನಾದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದೆ. ಕಳೆದೊಂದು ವಾರದಲ್ಲಿ ಚೀನಾದ 11 ಕಡೆಗಳಲ್ಲಿ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ, ಇದು ಡ್ರ್ಯಾಗನ್​ ರಾಷ್ಟ್ರದ ಆತಂಕಕ್ಕೆ ಕಾರಣವಾಗಿದೆ.

ಅಕ್ಟೋಬರ್​ 17ರಿಂದ ದೇಶದ ಅನೇಕ ಕಡೆಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ತಿದೆ ಹಾಗೂ ಇದು ವೇಗವಾಗಿ ವಿಸ್ತರಿಸುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ.ಫೆಂಗ್​​​ ಹೇಳಿದ್ದಾರೆ. ಬಿಲಿಯನ್​ಗಟ್ಟಲೇ ಜನರು ಇರುವ ಚೀನಾದಲ್ಲಿ 75 ಪ್ರತಿಶತಕ್ಕೂ ಅಧಿಕ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದರೂ ಸಹ ಸೋಂಕು ಹರಡುತ್ತಿರೋದು ಆತಂಕಕ್ಕೆ ಕಾರಣವಾಗಿದೆ.

BIG NEWS: ಧಮ್ ಇದ್ರೆ ಒಂದೇ ವೇದಿಕೆ ಮೇಲೆ ಚರ್ಚೆಗೆ ಬನ್ನಿ; ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಬಹಿರಂಗ ಸವಾಲು

ಕೊರೊನಾ ವೈರಸ್​ ಹರಡುವಿಕೆಯು ಚೀನಾ ದೇಶವನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಶೂನ್ಯ ಕೋವಿಡ್​ ನೀತಿಯನ್ನು ಜಾರಿಗೆ ತರಲು ಇದು ಪ್ರೇರೇಪಿಸುತ್ತಿದೆ. ಉತ್ತರ ಭಾಗದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ಹಿರಿಯ ನಾಗರಿಕರ ಗುಂಪಿನಲ್ಲಿ ಅಕ್ಟೋಬರ್​ 16ರಂದು ಮೊದಲ ಸೋಂಕು ಪತ್ತೆಯಾಗಿದೆ. ಇವರೆಲ್ಲರೂ ಕೊರೊನಾ ಲಸಿಕೆ​ ಪಡೆದಿದ್ದರೂ ಸಹ ಸೋಂಕಿಗೆ ಒಳಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...