alex Certify ಚೀನಾದಲ್ಲಿ ಭಾರೀ ಕಟ್ಟಡ ಕುಸಿತ: ಮೂವರು ಸಾವು, ಒಬ್ಬರಿಗೆ ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದಲ್ಲಿ ಭಾರೀ ಕಟ್ಟಡ ಕುಸಿತ: ಮೂವರು ಸಾವು, ಒಬ್ಬರಿಗೆ ಗಂಭೀರ ಗಾಯ

ಚೀನಾದಲ್ಲಿ ಭಾರೀ ಹಿಮಪಾತ ಸಂಭವಿಸುತ್ತಿದ್ದು ಹೈಲಾಂಗ್​ಜಿಯಾಂಗ್​ ಪ್ರಾಂತ್ಯದ ಜಿಮ್ನಾಷಿಯಂನಲ್ಲಿ ಹಿಮಪಾತದಿಂದ ಕಟ್ಟಡ ಕುಸಿದಿದ್ದು ಕನಿಷ್ಟ ಮೂವರು ಸಾವನ್ನಪ್ಪಿದ್ದು ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇದು ಈ ವರ್ಷ ಈ ಪ್ರಾಂತ್ಯದಲ್ಲಿ ಎರಡನೇ ಬಾರಿ ನಡೆದ ಕಟ್ಟಡ ಕುಸಿತದ ಘಟನೆಯಾಗಿದೆ.

ಜಿಯಾಮಸಿ ನಗರದ ಯುಚೆಂಗ್​ ಜಿಮ್​ ಸ್ಟೇಡಿಯಂನಲ್ಲಿ ಕಟ್ಟಡ ಕುಸಿತ ಸಂಭವಿಸಿದ ಸಂದರ್ಭದಲ್ಲಿ ಅಲ್ಲಿ ಮಕ್ಕಳು ಸಹ ಇದ್ದರು ಎನ್ನಲಾಗಿದೆ. ರಕ್ಷಣಾ ಪಡೆ ಸಿಬ್ಬಂದಿ ಬದುಕಿದ್ದವರ ಹುಡುಕಾಟಕ್ಕಾಗಿ ಬಾಸ್ಕೆಟ್​ಬಾಲ್​ ಮೈದಾನದಲ್ಲಿ ಸಂಪೂರ್ಣ ಆವೃತಗೊಂಡಿದ್ದ ಕಾಂಕ್ರೀಟ್​ ಅವಶೇಷಗಳ ಅಡಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರದಂದು ಈ ಘಟನೆ ಸಂಭವಿಸಿದ್ದು ಅಧಿಕೃತವಾಗಿ ಸಾವನ್ನಪ್ಪಿದವರ ಸಂಖ್ಯೆಯನ್ನು ಅಧಿಕಾರಿಗಳು ಮಂಗಳವಾರ ಘೋಷಣೆ ಮಾಡಿದ್ದಾರೆ.
ಅಧಿಕಾರಿಗಳ ಪ್ರಕಾರ ಜಿಮ್​ ಉಸ್ತುವಾರಿ ವಹಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜಿಮ್​ ಕುಸಿತಗೊಂಡ ಸಂದರ್ಭದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳ ಬಗ್ಗೆ ಈವರೆಗೆ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ಈ ಘಟನೆಯು ಚೀನಾದ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಸಖತ್​ ವೈರಲ್​ ಆಗಿದೆ. ಈ ವರ್ಷದ ಜುಲೈ ತಿಂಗಳಲ್ಲಿ ಇದೇ ಪ್ರಾಂತ್ಯದಲ್ಲಿ ಜಿಮ್​ ಕುಸಿತಗೊಂಡಿದ್ದು 11 ಮಂದಿ ಸಾವನ್ನಪ್ಪಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...