alex Certify ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಣೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಭಾರತಕ್ಕೆ ಹಸ್ತಾಂತರಿಸಿದ ಚೀನಾ

ಚೀನಾಗೆ ಸೇರಿದ ಭೂಭಾಗದಲ್ಲಿ ಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು(ಪಿಎಲ್ಎ) ಭಾರತೀಯ ಸೇನೆಗೆ ಒಪ್ಪಿಸಿದೆ. ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ‘ಅರುಣಾಚಲ ಪ್ರದೇಶದ ಮಿರಾಮ್
ಟ್ಯಾರೊನ್‌ನನ್ನು ಚೀನಾದ ಸೇನೆ(ಪಿಎಲ್ಎ) ಭಾರತೀಯ ಸೇನೆಗೆ ಒಪ್ಪಿಸಿದೆ. ಆತನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಭಾರತೀಯ ಸೇನೆಯು ಹಾಟ್‌ಲೈನ್‌ನಲ್ಲಿ ಚೀನಾ ಸೇನೆ ಜೊತೆಗೆ ಮಾತನಾಡಿದ್ದು, ಮಿರಾಮ್ ಟ್ಯಾರನ್ ಅವರನ್ನು ಶೀಘ್ರದಲ್ಲೇ ವಾಪಸ್ ಕಳುಹಿಸುವಂತೆ ಕೇಳಿತ್ತು. ಈಗ ನಮ್ಮ ಹುಡುಗ ನಮ್ಮ ಮಣ್ಣಿಗೆ ಹಿಂತಿರುಗಿರುವುದು ನಮಗೆ ಸಂತೋಷ ತಂದಿದೆ ಎಂದು ರಿಜಿಜು ಹೇಳಿದ್ದಾರೆ

ಜನವರಿ 18ರಂದು ಮಿರಾಮ್ ಟ್ಯಾರೋನ್ ನಾಪತ್ತೆ..!

ಜನವರಿ 18 ರಂದು, ಮಿರಾಮ್ ಟ್ಯಾರೋನ್ ಅಪಹರಣದ ವರದಿಗಳು ಬೆಳಕಿಗೆ ಬಂದವು, ನಂತರ ಭಾರತೀಯ ಸೇನೆಯು ಪಿಎಲ್ಎ ಅನ್ನು ಸಂಪರ್ಕಿಸಿ, ಶಿಯುಂಗ್ ಲಾ ಬಿಶಿಂಗ್ ಪ್ರದೇಶದಿಂದ ಬೇಟೆಯಾಡಲು ಹೊರಟಿದ್ದ ಮಿರಾಮ್ ಟ್ಯಾರೋನ್ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿತ್ತು. ಆತ ದಾರಿ ತಪ್ಪಿದ್ದರೆ ಅಥವಾ ತಮ್ಮ ವಶದಲ್ಲಿದ್ದರೆ, ಆತನನ್ನು ಪತ್ತೆ ಹಚ್ಚಿ ಭಾರತಕ್ಕೆ ತಕ್ಷಣ ಒಪ್ಪಿಸುವಂತೆ ಭಾರತೀಯ ಸೇನೆ ಚೀನಾ ಸೇನೆಗೆ ತಿಳಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...