alex Certify ಶಾಕಿಂಗ್: ಸಾಲ ಕೊಡದ ದಂಪತಿ ಅಕ್ರಮ ಬಂಧನದಲ್ಲಿಟ್ಟು ಬೆದರಿಸಿ ಮಗು ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಸಾಲ ಕೊಡದ ದಂಪತಿ ಅಕ್ರಮ ಬಂಧನದಲ್ಲಿಟ್ಟು ಬೆದರಿಸಿ ಮಗು ಮಾರಾಟ

ಧಾರವಾಡ: ಸಾಲ ನೀಡದ ದಂಪತಿಯನ್ನು ಅಕ್ರಮ ಬಂಧನದಲ್ಲಿಟ್ಟು ಅವರನ್ನು ಬೆದರಿಸಿ ಒಂದು ತಿಂಗಳ ಮಗುವನ್ನು ಮಾರಾಟ ಮಾಡಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಮಗು ಮಾರಾಟ ಮಾಡಲು ದಂಪತಿಗೆ ಬೆದರಿಸಿದ್ದ ನಾಲ್ವರು ಹಾಗೂ ಮಗುವನ್ನು ಖರೀದಿಸಿದ ಉಡುಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ದಂಪತಿಯ 50 ಸಾವಿರ ರೂ. ರೂಪಾಯಿ ಸಾಲ ಮಾಡಿದ್ದಾರೆ. ಬಡ್ಡಿ ಸೇರಿ 1.50 ಲಕ್ಷ ರೂಪಾಯಿ ಆಗಿದೆ. ಸಾಲ ತೀರಿಸದ ದಂಪತಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಸಾಲ ನೀಡಿದವರು ಒಂದು ತಿಂಗಳು ಹತ್ತು ದಿನದ ಗಂಡುಮಗುವನ್ನು ಉಡುಪಿ ಮೂಲದ ದಂಪತಿಗೆ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿಸಿದ್ದಾರೆ. ನಾಲ್ಕು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...