alex Certify ಕಾರ್ ಬಳಿ ನಿಂತಿದ್ದಾಗಲೇ ಮತ್ತೊಂದು ಕಾರ್ ಡಿಕ್ಕಿ: ಅಪಘಾತದಲ್ಲಿ ಮಹಿಳೆಯರಿಬ್ಬರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ ಬಳಿ ನಿಂತಿದ್ದಾಗಲೇ ಮತ್ತೊಂದು ಕಾರ್ ಡಿಕ್ಕಿ: ಅಪಘಾತದಲ್ಲಿ ಮಹಿಳೆಯರಿಬ್ಬರು ಸಾವು

ಚಿಕ್ಕಬಳ್ಳಾಪುರ: ಕಾರ್ ಬಳಿ ನಿಂತಿದ್ದ ಮಹಿಳೆಯರಿಗೆ ಮತ್ತೊಂದು ಕಾರ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಆಂಧ್ರಪ್ರದೇಶ ಮೂಲದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಶೆಟ್ಟಿಗೆರೆ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಕಾರ್ಮಿಕರಾದ ಶಬರೀಶಮ್ಮ(30) ಮತ್ತು ನಾಗಮ್ಮ(70) ಮೃತಪಟ್ಟವರು ಎಂದು ಹೇಳಲಾಗಿದೆ.

ಮಳೆ ಬರುತ್ತಿದ್ದ ಕಾರಣ ರಸ್ತೆ ಬದಿ ಕಾರ್ ನಿಲ್ಲಿಸಿ ಕೆಳಗೆ ಇಳಿದಿದ್ದರು. ಕಾರ್ ಮೇಲಿದ್ದ ವಸ್ತುಗಳಿಗೆ ಟಾರ್ಪಲ್ ಮುಚ್ಚಲು ಕೆಳಗೆ ಇಳಿದು ಕಾರಿನ ಬಳಿ ನಿಂತಿದ್ದ ವೇಳೆ ವೇಗವಾಗಿ ಬಂದ ಮತ್ತೊಂದು ಕಾರ್ ಹರಿದು ಶಬರೀಶಮ್ಮ ಮತ್ತು ನಾಗಮ್ಮ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಪುಟ್ಟಪರ್ತಿಯ ವಿಜಾಪುರಂ ಕಾರ್ಮಿಕರು ಇವರಾಗಿದ್ದಾರೆ. ಪೇರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...