ಚತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ಕರುವಿನ ಜನನವಾಗಿದೆ. ಆ ಕರು ಎಲ್ಲಾ ಕರುಗಳಂತೆ ಜನಿಸಿದ್ದರೆ ಈ ಸುದ್ದಿಯಾಗುತ್ತಿರಲಿಲ್ಲ. ಆದರೆ ಮೂರು ಕಣ್ಣಿನೊಂದಿಗೆ ಹುಟ್ಟಿರುವ ಪುಟ್ಟ ಕರುವು ಮಾಲೀಕ ಹಾಗೂ ಆ ಊರಿನವರನ್ನ ಆಶ್ಚರ್ಯಚಕಿತಗೊಳಿಸಿದೆ.
ಮೂರು ಕಣ್ಣು ಅಂದಾಕ್ಷಣ ಭಾರತೀಯರಿಗೆ ನೆನಪಾಗುವುದೆ ಮುಕ್ಕಣ್ಣಿನ ಶಿವ. ಈ ಊರಿನ ಜನರು ಸಹ ಈ ಮೂರು ಕಣ್ಣಿನೊಂದಿಗೆ ಹುಟ್ಟಿರುವ ಕರುವನ್ನ ಮಹಾದೇವನ ಪುನರ್ಜನ್ಮ, ಶಿವನೇ ನಮ್ಮ ಗ್ರಾಮದಲ್ಲಿ ಕರುವಿನ ರೂಪದಲ್ಲಿ ಜನಿಸಿದ್ದಾನೆ ಎಂದು ನಂಬಿದ್ದಾರೆ. ಜೊತೆಗೆ ಹಣ್ಣು ಕಾಯಿಯಿಟ್ಟು ಕರುವಿಗೆ ದೈವಸ್ಥಾನ ನೀಡಿ ಪೂಜಿಸುತ್ತಿದ್ದಾರೆ.
ಕರು ಜನನವಾದ ಮೇಲೆ ಅದನ್ನ ನೋಡಿದಾಗ ನಮಗೆ ಆಶ್ಚರ್ಯವಾಯಿತು. ಕರುವಿನ ಮೂಗಿನಲ್ಲಿ ಎರಡು ಹೊಳ್ಳೆಗಳ ಬದಲಾಗಿ ನಾಲ್ಕು ಹೊಳ್ಳೆಗಳಿವೆ. ಮೂರು ಕಣ್ಣುಗಳಿವೆ. ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗಳನ್ನ ಮಾಡಿಸಲಾಗಿದೆ. ಕರು ಆರೋಗ್ಯಕರವಾಗಿದೆ ಎಂಬ ರಿಪೋರ್ಟ್ ಬಂದಿದೆ. ಕರುವನ್ನು ನೋಡಿದ ನಮ್ಮ ಗ್ರಾಮದವರು ಶಿವನ ಪ್ರತಿರೂಪ ಎಂದು ನಂಬಿದ್ದಾರೆ, ಕರುವನ್ನ ಪೂಜಿಸುತ್ತಿದ್ದಾರೆ ಎಂದು ಕರುವಿನ ಮಾಲೀಕ ರಾಜೇಶ್ ಹೇಳಿಕೆ ನೀಡಿದ್ದಾರೆ.