alex Certify ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

ಛತ್ತೀಸಗಢದ ಆಡಳಿತಾರೂಢ ಕಾಂಗ್ರೆಸ್​ ಶಾಸಕರೊಬ್ಬರು ಮೀನು ಸಾಕಣಿಕಾ ಕೊಳದ ವಿಚಾರವಾಗಿ ಬಲರಾಂಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಯನ್ನು ನಿಂದಿಸುತ್ತಿರುವ ಆಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ರಾಮಾನುಗಂಜ್​ ಪಟ್ಟಣಕ್ಕೆ ಡೆಪ್ಯೂಟಿ ಕಲೆಕ್ಟರ್​ ಆಗಿ ಪ್ರಫುಲ್​​ ರಾಜಕ್​ ನೇಮಕಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ಆಡಿಯೋ ಕ್ಲಿಪ್​ನಲ್ಲಿ ಶಾಸಕರಿಂದ ನಿಂದಿಸಿಕೊಳ್ಳುತ್ತಿರುವ ಅಧಿಕಾರಿ ತಾನೇ ಎಂದು ಹೇಳಿಕೊಂಡಿದ್ದಾರೆ. ಬುಧವಾರ ಸಂಜೆ ಕರೆ ಮಾಡಿದ ಶಾಸಕರು ನನ್ನನ್ನು ನಿಂದಿಸಿದ್ದಾರೆ ಎಂದು ಹೇಳಿದ್ರು. ಆದರೆ ಈ ಎಲ್ಲಾ ಆರೋಪಗಳನ್ನು ಶಾಸಕ ತಳ್ಳಿ ಹಾಕಿದ್ದಾರೆ.

ರಾಮಾನುಜಗಂಜ್​ ಕ್ಷೇತ್ರದ ಶಾಸಕ ಬ್ರಹಸ್ಪತ್ ಸಿಂಗ್​ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಮ್ಮ ಪಕ್ಷದ ಕೆಲ ಹಿರಿಯ ನಾಯಕರು ಹಾಗೂ ಬಿಜೆಪಿಯವರು ಸೇರಿ ನನ್ನ ರಾಜಕೀಯ ಜೀವನಕ್ಕೆ ಮಸಿ ಬಳಿಯಲು ಈ ರೀತಿಯ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈ ಆಡಿಯೋ ವೈರಲ್​ ಆಗುತ್ತಿದ್ದಂತೆಯೇ ವಿರೋಧ ಪಕ್ಷ ಬಿಜೆಪಿ ನಾಯಕರು ಬ್ರಹಸ್ಪತ್​ ಸಿಂಗ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಂದಹಾಗೆ ಈ ಎಲ್ಲಾ ಘಟನೆಗೆ ಮುಖ್ಯ ಕಾರಣ ಮೀನು ಸಾಕಣಿಗೆ ಗುತ್ತಿಗೆಯಾಗಿದೆ. ಕೆರೆಯಲ್ಲಿ ಮೀನು ಸಾಕಣಿಕೆ ಗುತ್ತಿಗೆ ವಿಚಾರದಲ್ಲಿ 2 ಗುಂಪುಗಳ ನಡುವೆ ವಿವಾದ ಏರ್ಪಟ್ಟಿತ್ತು. ಕಂದಾಯ ಇಲಾಖೆ ಅಧಿಕಾರಿ ಒಂದು ಗುಂಪಿನ ಪರವಾಗಿದ್ದರೆ ಶಾಸಕ ಸಿಂಗ್​ ಇನ್ನೊಂದು ಗುಂಪಿನ ಪರವಾಗಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...