alex Certify ಛತ್ತೀಸ್ ಗಡ ವಿಧಾನಸಭೆ ಉಪಸಭಾಪತಿ ಹೃದಯಘಾತಕ್ಕೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ತೀಸ್ ಗಡ ವಿಧಾನಸಭೆ ಉಪಸಭಾಪತಿ ಹೃದಯಘಾತಕ್ಕೆ ಬಲಿ

ಛತ್ತೀಸ್ ಗಢ ವಿಧಾನಸಭೆಯ ಉಪಸಭಾಪತಿ ಹಾಗೂ ಕಾಂಗ್ರೆಸ್ ಶಾಸಕ ಮನೋಜ್ ಸಿಂಗ್ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಕಳೆದ ರಾತ್ರಿ ಹೃದಯಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

58 ವರ್ಷದ ಮನೋಜ್ ಸಿಂಗ್ ಮಾಂಡವಿ, ಕಂಕೇರಾ ಜಿಲ್ಲೆಯ ಭಾನುಪ್ರಕಾಶ್ ಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಶನಿವಾರದಂದು ತಮ್ಮ ಗ್ರಾಮವಾದ ನಾಥಿಯಾ ನವಗಾಂನ್ ನಲ್ಲಿರುವಾಗಲೇ ಅವರಿಗೆ ಹೃದಯಘಾತವಾಗಿತ್ತು.

ಬಳಿಕ ಕೂಡಲೇ ಪಕ್ಕದ ಧಾಮತ್ರಿ ಪಟ್ಟಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮನೋಜ್ ಸಿಂಗ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...