alex Certify ಒಂದೇ ಒಂದು ಬಿಸ್ಕೆಟ್​ಗಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಸಿಕ್ಕಿದ್ದು ಬರೋಬ್ಬರಿ 1 ಲಕ್ಷ ರೂ. ಪರಿಹಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಒಂದು ಬಿಸ್ಕೆಟ್​ಗಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಸಿಕ್ಕಿದ್ದು ಬರೋಬ್ಬರಿ 1 ಲಕ್ಷ ರೂ. ಪರಿಹಾರ…!

ಪ್ರಸಿದ್ಧ ಬಿಸ್ಕಟ್​ ಕಂಪನಿಗಳಲ್ಲಿ ಒಂದಾದ ಸನ್​ಫೀಸ್ಟ್​ ಮಾರಿ ಲೈಟ್​ನ ಪ್ಯಾಕೇಟ್​ನ ಮೇಲೆ ನಮೂದಾಗಿದ್ದ ಬಿಸ್ಕೆಟ್​ ಸಂಖ್ಯೆಗಳಿಗಿಂತ ಒಂದು ಬಿಸ್ಕೆಟ್​ ಕಡಿಮೆ ಇದೆ ಎಂಬ ದೂರು ನೀಡಿದ ವ್ಯಕ್ತಿಗೆ ತಿರವಳ್ಳೂರು ಜಿಲ್ಲಾ ಗ್ರಾಹಕರ ವೇದಿಕೆಯು 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಐಟಿಸಿ ಲಿಮಿಟೆಡ್​ ಫುಡ್​ ವಿಭಾಗಕ್ಕೆ ಸೂಚನೆ ನೀಡಿದೆ. ಗ್ರಾಹಕ ಖರೀದಿ ಮಾಡಿದ್ದ ಬಿಸ್ಕಟ್​ ಪ್ಯಾಕೇಟ್​ನಲ್ಲಿ 16 ಬಿಸ್ಕಟ್​ಗಳ ಬದಲು 15 ಬಿಸ್ಕಟ್​ಗಳು ಇದ್ದವು ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ಆದೇಶ ಹೊರಡಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು, ಸನ್​ಫೀಸ್ಟ್​ ಬಿಸ್ಕತ್​​ ಬ್ಯಾಚ್ ನಂ.0502C36ರ ಎಲ್ಲಾ ಬಿಸ್ಕಟ್​ ಪ್ಯಾಕುಗಳ ಮಾರಾಟವನ್ನು ನಿಲ್ಲಿಸುವಂತೆ ಕಂಪನಿಗೆ ಸೂಚನೆ ನೀಡಿದೆ. ಬಿಸ್ಕಟ್​ನ ತೂಕ ಸಮಾನಾಗಿದೆ ಎಂಬ ಕಂಪನಿಯ ವಾದವನ್ನು ತಳ್ಳಿ ಹಾಕಿದ ಗ್ರಾಹಕರ ವೇದಿಕೆಯು ದೂರುದಾರರಾದ ಚೆನ್ನೈನ ಪಿ ದಿಲ್ಲಿ ಬಾಬುರಿಗೆ ಪರಿಹಾರ ನೀಡುವಂತೆ ಸೂಚಿಸಿದೆ.

ಈ ಬಿಸ್ಕಟ್​ಗಳನ್ನು ತೂಕದ ಆಧಾರದ ಮೇಲೆ ಮಾರಾಟ ಮಾಡಿದ್ದೇವೆಯೇ ಹೊರತು ಬಿಸ್ಕಟ್​ಗಳ ಸಂಖ್ಯೆಯನ್ನು ಆಧರಿಸಿಲ್ಲ ಎಂದು ಕಂಪನಿ ಪರ ವಕೀಲರು ವಾದಿಸಿದ್ದಾರೆ. ಆದರೆ ಬಿಸ್ಕಟ್​ ಮೇಲೆ ನಮೂದಾದ ಜಾಹೀರಾತನ್ನು ಪೂರೈಸುವುದು ಕಂಪನಿ ಜವಾಬ್ದಾರಿಯಾಗಿದೆ ಎಂದು ಹೇಳಿದ ಗ್ರಾಹಕ ರಕ್ಷಣಾ ವೇದಿಕೆಯು ವಕೀಲರ ವಾದವನ್ನು ತಳ್ಳಿ ಹಾಕಿದೆ.

ಗ್ರಾಹಕನನ್ನು ಸಂತೃಪ್ತಿಪಡಿಸುವಲ್ಲಿ ಲೇಬಲ್​ಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಲೇಬಲ್​ನಲ್ಲಿ ನಮೂದಾದ ಎಲ್ಲಾ ಮಾಹಿತಿಗಳನ್ನು ಕಂಪನಿಯು ಪೂರೈಸಲೇಬೇಕು ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...