alex Certify ರಾತ್ರಿ ವೇಳೆ ಸ್ನೇಹಿತರ ಸವಾಲು ಸ್ವೀಕರಿಸಿ ಮನೆಯೊಳಗೆ ನುಗ್ಗಿ ಮಹಿಳೆ ಸ್ಪರ್ಶಿಸಿದ ಕುಡುಕನಿಗೆ ಥಳಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ವೇಳೆ ಸ್ನೇಹಿತರ ಸವಾಲು ಸ್ವೀಕರಿಸಿ ಮನೆಯೊಳಗೆ ನುಗ್ಗಿ ಮಹಿಳೆ ಸ್ಪರ್ಶಿಸಿದ ಕುಡುಕನಿಗೆ ಥಳಿತ

ಚೆನ್ನೈ: ಮದ್ಯಪಾನ ಮಾಡಿದ ಮತ್ತಿನಲ್ಲಿ ಸ್ನೇಹಿತರ ಸವಾಲು ಸ್ವೀಕರಿಸಿದ್ದ ಕುಡುಕ ಮನೆಯೊಳಗೆ ನುಗ್ಗಿ ಮಹಿಳೆಯನ್ನು ‘ಸ್ಪರ್ಶಿಸಿ’ ಧರ್ಮದೇಟು ತಿಂದಿದ್ದಾನೆ.

ಗುರುವಾರ ರಾತ್ರಿ ಮನೆಯೊಂದಕ್ಕೆ ನುಸುಳಿದ್ದ ಕುಡುಕನನ್ನು ಚೆನ್ನೈನ ಅಂಬತ್ತೂರು ಬಳಿಯ ಕಲಿಕುಪ್ಪಂ ನಿವಾಸಿಗಳು ಹಿಡಿದಿದ್ದಾರೆ. ಮನೆಯಲ್ಲಿದ್ದ ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ಕುಡುಕ ವ್ಯಕ್ತಿಯನ್ನು ದರೋಡೆಕೋರ ಎಂದು ತಿಳಿದ ಸ್ಥಳೀಯರು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನೆರೆಹೊರೆಯವರು ವಿಚಾರಿಸಿದಾಗ ಮನೆಯೊಳಗೆ ನುಸುಳಲು ಮತ್ತು ಮಹಿಳೆಯನ್ನು ಸ್ಪರ್ಶ ಮಾಡುವಂತೆ ಕೆಲವು ಸ್ನೇಹಿತರು ಅವನಿಗೆ ಸವಾಲು ಹಾಕಿದ್ದರು. ಅಂತೆಯೇ ನಾನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಕುಡುಕ ಮನೆಯೊಳಗೆ ನುಗ್ಗಿ ಮಹಿಳೆಯನ್ನು ಸ್ಪರ್ಶಿಸಿದಾಗ ಆಕೆ ಕಿರುಚಾಡಿದ್ದು, ಕುಟುಂಬದವರು, ನೆರೆಹೊರೆಯವರು ಬಂದು ಆತನನ್ನು ಹಿಡಿದುಕೊಂಡಿದ್ದಾರೆ. ಶುಕ್ರವಾರದಂದು ವಿಡಿಯೋ ವೈರಲ್ ಆಗಿದೆ.

ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ, ತಾನು ಬೆಟ್ಟಿಂಗ್ ಗೆಲ್ಲಲು ಮನೆಗೆ ಪ್ರವೇಶಿಸಿದ್ದೇನೆ ಎಂದು ಸುತ್ತಮುತ್ತಲಿನ ಜನರಿಗೆ ಹೇಳುತ್ತಿರುವುದು ಕೇಳಿಬರುತ್ತಿದೆ. ಆದರೆ, ಪದೇ ಪದೇ ಕೇಳಿದರೂ ಆತ ತನ್ನ ಸ್ನೇಹಿತರ ವಿವರಗಳನ್ನು ನೀಡಿಲ್ಲ. ಆರೋಪಿಯನ್ನು ಥಳಿಸಲಾಗಿದ್ದು, ಪೊಲೀಸ್ ತಂಡವು ಆತನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...