alex Certify ಕಳ್ಳನನ್ನು ಚೇಸ್​ ಮಾಡಿದ್ದ ಬಾಲಕನಿಗೆ ಸೈಕಲ್​​ ಹಿಂತಿರುಗಿಸಿದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳನನ್ನು ಚೇಸ್​ ಮಾಡಿದ್ದ ಬಾಲಕನಿಗೆ ಸೈಕಲ್​​ ಹಿಂತಿರುಗಿಸಿದ ಪೊಲೀಸ್

ತನ್ನ ಸೈಕಲ್​​ ಕದ್ದಿದ್ದ ಕಳ್ಳನನ್ನು ಬೆನ್ನಟ್ಟಿದರೂ ಸಹ ಆತನಿಂದ ಸೈಕಲ್​ ವಾಪಸ್​ ಪಡೆದುಕೊಳ್ಳುವಲ್ಲಿ ವಿಫಲನಾಗಿದ್ದ ಏಳು ವರ್ಷದ ಬಾಲಕನಿಗೆ ಪೊಲೀಸರು ಸೈಕಲ್​​ನ್ನು ಮರಳಿ ತಲುಪಿಸಿದ್ದು ಇದರಿಂದ ಬಾಲಕನ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.‌

ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ಫೂಟೇಜ್​​ನಲ್ಲಿ ಕೆಂಪು ಶರ್ಟ್​ ಹಾಗೂ ನೀಲಿ ಬಣ್ಣದ ಜೀನ್ಸ್​ ಧರಿಸಿದ ವ್ಯಕ್ತಿಯು ಫೆಬ್ರವರಿ ಮೂರರ ಸಂಜೆ 7:30ರ ಸುಮಾರಿಗೆ ಚೆನ್ನೈನ ಪುರಸಾವಲ್ಕಮ್​ ಬಳಿ ಇರುವ ಅಪಾರ್ಟ್​ಮೆಂಟ್​ ಒಳಗೆ ನುಸುಳುತ್ತಿರುವುದನ್ನು ಕಾಣಬಹುದಾಗಿದೆ. ಅಪಾರ್ಟ್​ಮೆಂಟ್​ ಒಳಹೊಕ್ಕಿದ ಕೆಲವೇ ಸೆಕೆಂಡುಗಳಲ್ಲಿ ಸೈಕಲ್ ಜೊತೆಗೆ ಕಳ್ಳ ಹೊರಬಂದಿದ್ದಾನೆ. ಈತನ ಹಿಂದೆಯೇ ಮಹಿಳೆ ಹಾಗೂ ಬಾಲಕ ಆತನನ್ನು ಬೆನ್ನಟ್ಟಿದ್ದಾರೆ.

ಇನ್ನು ಪ್ರಕರಣದ ವಿಚಾರವಾಗಿ ಮಾತನಾಡಿದ ಡಿಸಿಪಿ ಕಾರ್ತಿಕೇಯನ್ ಬಾಲಕ ಕಳ್ಳನನ್ನು ಚೇಸ್​ ಮಾಡುತ್ತಿರುವ ವಿಡಿಯೋ ನೋಡಿದ ಬಳಿಕ ಬಾಲಕನ ಧೈರ್ಯವನ್ನು ಕಂಡು ನಾನು ರೋಮಾಂಚಿತನಾದೆ. ಅಂದೇ ನಾನು ಪೊಲೀಸರು ಆತನ ಸೈಕಲ್ ವಾಪಸ್​ ತಂದುಕೊಡುತ್ತಾರೆ ಎಂಬ ವಿಶ್ವಾಸವನ್ನು ಬಾಲಕನ ಮನಸ್ಸಿನಲ್ಲಿ ಬಿತ್ತಬೇಕು ಎಂದು ಭಾವಿಸಿದೆ.

ಮಾರನೇ ದಿನ ನಾವು ಆರೋಪಿ ಅಸರ್​ನನ್ನು ಬಂಧಿಸಿದೆವು. ಆದರೆ ಆರೋಪಿಯ ಬಗ್ಗೆ ನನಗೂ ಬೇಸರವಿದೆ. ಆತನ ತಂದೆ ತೀರಿ ಹೋಗಿದ್ದಾರೆ. ಈತನ ದಾರಿಯನ್ನು ತಪ್ಪಿಸಿ ಆತನಿಗೆ ಮಾದಕ ದ್ರವ್ಯ ವ್ಯಸನಿಯಾಗುವಂತೆ ಕೆಲವರು ಮಾಡಿದ್ದರು. ಹೀಗಾಗಿ ಆರೋಪಿಯ ವಿರುದ್ಧ ಎಫ್​ಐಆರ್​ ದಾಖಲಿಸದೇ ಸಿಎಸ್ಆರ್​ ದಾಖಲಿಸಿಕೊಂಡು ಆರೋಪಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...