alex Certify ಗ್ರಾಹಕರಿಗೆ ಈ ಬ್ಯಾಂಕ್ ನೀಡ್ತಿದೆ ಉಡುಗೊರೆ..! ಹಬ್ಬದ ಸಮಯದಲ್ಲಿ ಅಗ್ಗದ ಬಡ್ಡಿ ದರಕ್ಕೆ ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಈ ಬ್ಯಾಂಕ್ ನೀಡ್ತಿದೆ ಉಡುಗೊರೆ..! ಹಬ್ಬದ ಸಮಯದಲ್ಲಿ ಅಗ್ಗದ ಬಡ್ಡಿ ದರಕ್ಕೆ ಸಾಲ

ಹಬ್ಬದ ಋತು ಶುರುವಾಗಿದೆ. ಈ ಸಂದರ್ಭದಲ್ಲಿ ಎಲ್ಲ ಕಂಪನಿಗಳು,ಗ್ರಾಹಕರನ್ನು ಸೆಳೆಯಲು ಭರ್ಜರಿ ಆಫರ್ ನೀಡ್ತಿವೆ. ಇದಕ್ಕೆ ಬ್ಯಾಂಕ್ ಗಳೂ ಹೊರತಾಗಿಲ್ಲ. ಬ್ಯಾಂಕ್, ಗ್ರಾಹಕರಿಗೆ ಅನೇಕ ಆಫರ್ ನೀಡ್ತಿದೆ. ಯೆಸ್ ಬ್ಯಾಂಕ್ ಹಬ್ಬದ ಋತುವಿನಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಉಡುಗೊರೆಯನ್ನು ನೀಡುತ್ತಿದೆ.

ಸೀಮಿತ ಅವಧಿಯ ವಿಶೇಷ ಕೊಡುಗೆಯ ಅಡಿಯಲ್ಲಿ ಬ್ಯಾಂಕ್, ಗೃಹ ಸಾಲವನ್ನು ಶೇಕಡ 6.7 ರ ಬಡ್ಡಿ ದರದಲ್ಲಿ ನೀಡ್ತಿದೆ. ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಗೃಹ ಸಾಲಗಳ ಮೇಲೆ ವಿಶೇಷ ಕೊಡುಗೆಗಳನ್ನು ಪರಿಚಯಿಸಿವೆ. ಈಗ ಯೆಸ್ ಬ್ಯಾಂಕ್ ಕೂಡ ಹಬ್ಬದ ಕೊಡುಗೆಯಾಗಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡ್ತಿದೆ.

ಗಾಂಧಿ ಜಯಂತಿ ಪ್ರಯುಕ್ತ ʼಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ಆಫರ್

ಯಸ್ ಬ್ಯಾಂಕ್, ಇದಕ್ಕೆ ಪ್ರೀಮಿಯಂ ಹೋಮ್ ಲೋನ್ ಎಂದು ಹೆಸರಿಟ್ಟಿದೆ. 90 ದಿನಗಳ ಈ ಆಫರ್ ಅಡಿಯಲ್ಲಿ, ಬ್ಯಾಂಕ್ ಆರಂಭಿಕ ಬಡ್ಡಿದರದಲ್ಲಿ ಶೇಕಡಾ 6.7 ರಷ್ಟು ಗೃಹ ಸಾಲವನ್ನು ನೀಡುತ್ತಿದೆ. ಮಹಿಳೆಯರಿಗೆ ಸಾಲದ ಮೇಲೆ ಶೇಕಡಾ 0.05 ರಷ್ಟು ಹೆಚ್ಚುವರಿ ರಿಯಾಯಿತಿ ಸಿಗ್ತಿದೆ.

ಇಷ್ಟೆ ಅಲ್ಲದೆ, ಯೆಸ್ ಬ್ಯಾಂಕ್ ಗೃಹ ಸಾಲದ ಅವಧಿಯನ್ನು 35 ವರ್ಷಗಳಿಗೆ ವಿಸ್ತರಿಸಿದೆ. ಸಾಮಾನ್ಯವಾಗಿ ಗೃಹ ಸಾಲದ ಅವಧಿ 30 ವರ್ಷಗಳವರೆಗೆ ಇರುತ್ತದೆ. ಸಂಬಳ ಪಡೆಯುವ ಗ್ರಾಹಕರು, ಕೆಲವೇ ಕೆಲವು ದಾಖಲೆಗಳನ್ನು ನೀಡುವ ಮೂಲಕ,35 ವರ್ಷಗಳ ಅವಧಿಗೆ ಸಾಲವನ್ನು ತೆಗೆದುಕೊಳ್ಳಬಹುದು.

ಕ್ರೇಟಾ, ಸೆಲ್ಟೋಸ್‌ಗೆ ಪ್ರತಿಸ್ಪರ್ಧಿಯಾಗಿ ಟಾಟಾದಿಂದ ಬರುತ್ತಿದೆ ಮತ್ತೊಂದು ಎಸ್‌ಯುವಿ

ಯೆಸ್ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಪ್ರಕಾರ, ಬ್ಯಾಂಕ್ ಪ್ರಸ್ತುತ ಶೇಕಡಾ 8.95 ರಿಂದ ಶೇಕಡಾ 11.80 ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಆದ್ರೆ ಹಬ್ಬದ ಕೊಡುಗೆಯಾಗಿ ಬಡ್ಡಿ ದರವನ್ನು ಶೇಕಡಾ 2.25ರಷ್ಟು ಇಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...