alex Certify ಸಿನಿಮಾ ಪ್ರಮೋಷನ್ ವೇಳೆ ನಿರೀಕ್ಷೆಗೂ ಮೀರಿ ಆಗಮಿಸಿದ ಜನ; ಪ್ರಚಾರ ಕಾರ್ಯಕ್ರಮವೇ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ಪ್ರಮೋಷನ್ ವೇಳೆ ನಿರೀಕ್ಷೆಗೂ ಮೀರಿ ಆಗಮಿಸಿದ ಜನ; ಪ್ರಚಾರ ಕಾರ್ಯಕ್ರಮವೇ ರದ್ದು

ಮಲೆಯಾಳಂನ ಬಹು ನಿರೀಕ್ಷಿತ ತಳ್ಳುಮಾಲಾ ಆಗಸ್ಟ್​ 12ರಂದು ಬಿಡುಗಡೆಗೆ ಸಿದ್ಧವಾಗಿದೆ. ಟೊವಿನೋ ಥಾಮಸ್​ ಮತ್ತು ಕಲ್ಯಾಣಿ ಪ್ರಿಯದರ್ಶನ್​ ಚಿತ್ರದ ಪ್ರಮುಖ ಪಾತ್ರ ನಿಭಾಯಿಸಿದ್ದು, ಇದೀಗ ಚಿತ್ರದ ತಯಾರಕರು ಪ್ರಚಾರದ ಭರಾಟೆಯಲ್ಲಿದ್ದಾರೆ.

ಕೋಝಿಕ್ಕೋಡ್​ನಲ್ಲಿರುವ ಮಾಲ್​ನಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ನಿರೀಕ್ಷೆ ಇರುವುದರಿಂದ ಸಾವಿರಾರು ಜನ ಅಲ್ಲಿಗೆ ಜಮಾಯಿಸಿದ್ದು, ಪರಿಸ್ಥಿತಿ ಕೈಮೀರಿದ ಕಾರಣ ಕಾರ್ಯಕ್ರಮವನ್ನೇ ರದ್ದುಪಡಿಸಬೇಕಾಗಿ ಬಂದಿತು.

ಸುರಕ್ಷತೆಯ ಕಾರಣದಿಂದ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು ಎಂದು ಚಿತ್ರತಂಡ ಹೇಳಿಕೊಂಡಿದ್ದು, ಮಾಲ್​ನ ಅಸ್ತವ್ಯಸ್ತ ಸನ್ನಿವೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಲನಚಿತ್ರ ವಿತರಕ ಎಬಿ ಜಾರ್ಜ್​ ಅವರು ತಮ್ಮ ಟ್ವಿಟರ್​ ಹ್ಯಾಂಡಲ್​ನಲ್ಲಿ ಪ್ರೇಕ್ಷಕರು‌ ಮಾಲ್‌ನಲ್ಲಿ‌ ತುಂಬಿಹೋಗಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.

ಮಾಲ್​ನೊಳಗೆ ಇಷ್ಟೊಂದು ದೊಡ್ಡ ಸೇರಲು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದು, ಮಾಲ್​ನವರು ಸುರಕ್ಷತಾ ಮಾನದಂಡ ಅನುಸರಿಸದಿರುವ ಬಗ್ಗೆ ಆಕ್ಷೇಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...