alex Certify Viral Video | ಹಾರುತ್ತಿದ್ದ ವಿಮಾನದಿಂದ ಸೆರೆಯಾಯ್ತು ʼಚಂದ್ರಯಾನ 3ʼ ಉಡಾವಣೆ; ಲೈವ್​ ಆಗಿ ಕಣ್ತುಂಬಿಕೊಂಡ ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಹಾರುತ್ತಿದ್ದ ವಿಮಾನದಿಂದ ಸೆರೆಯಾಯ್ತು ʼಚಂದ್ರಯಾನ 3ʼ ಉಡಾವಣೆ; ಲೈವ್​ ಆಗಿ ಕಣ್ತುಂಬಿಕೊಂಡ ಪ್ರಯಾಣಿಕರು

ಇಸ್ರೋ ನಿನ್ನೆ ಯಶಸ್ವಿಯಾಗಿ ಚಂದ್ರಯಾನ 3ಯನ್ನು ಹೊತ್ತ ನೌಕೆಯನ್ನು ರಾಕೆಟ್​ ಮೂಲಕ ಉಡಾವಣೆ ಮಾಡಿದೆ. ಅನೇಕರು ಈ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ, ಟಿವಿಗಳಲ್ಲಿ ಕಣ್ತುಂಬಿಕೊಂಡಿದ್ದಾರೆ.

ಇನ್ನೂ ಅನೇಕರು ಶ್ರೀಹರಿಕೋಟಾದಿಂದಲೇ ಈ ದೃಶ್ಯವನ್ನು ವೀಕ್ಷಿಸಿದ್ದಾರೆ. ಆದರೆ ಇಲ್ಲೊಬ್ಬ ಅದೃಷ್ಟವಂತ ಪ್ರಯಾಣಿಕ ಇಸ್ರೋದ ಚಂದ್ರಯಾನ 3 ಉಡಾವಣೆಯನ್ನು ಚೆನ್ನೈ ಹಾಗೂ ಢಾಕಾ ನಡುವೆ ತೆರಳುತ್ತಿದ್ದ ಇಂಡಿಗೋ ವಿಮಾನದ ಕಿಟಕಿಯ ಬದಿಯ ಸೀಟಿನಲ್ಲಿ ಕುಳಿತು ಕಣ್ತುಂಬಿಕೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 2:35ಕ್ಕೆ ಸರಿಯಾಗಿ ಇಸ್ರೋ ಹೆವಿ-ಲಿಫ್ಟ್ LVM3-M4 ರಾಕೆಟ್ ನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕೇಶ ಕೇಂದ್ರದಿಂದ ಉಡಾವಣೆ ಮಾಡಿದೆ.

ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರಾಕೆಟ್​ನ  ವಿಡಿಯೋವನ್ನು ಶೇರ್​ ಮಾಡಿದ್ದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಚಂದ್ರಯಾನ 3 ನೌಕೆಯು 40 ದಿನಗಳ ಪ್ರಯಾಣ ಪೂರ್ಣಗೊಳಿಸಿದ ಬಳಿಕ ಆಗಸ್ಟ್​ 23ರಂದು ಚಂದ್ರನ ಅಂಗಳ ತಲುಪಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...