alex Certify ಬರೋಬ್ಬರಿ 43 ಲಕ್ಷ ರೂ. ಗಳಿಗೆ ಹರಾಜಾಗ್ತಿದೆ ಪತ್ರಕರ್ತ ವರದಿ ಮಾಡಿದ್ದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 43 ಲಕ್ಷ ರೂ. ಗಳಿಗೆ ಹರಾಜಾಗ್ತಿದೆ ಪತ್ರಕರ್ತ ವರದಿ ಮಾಡಿದ್ದ ವಿಡಿಯೋ

‘ಕರಾಚಿಯಿಂದ ಜನರು ತಮ್ಮ ಪ್ರೀತಿಪಾತ್ರರ ಜೊತೆ ಈದ್​ ಹಬ್ಬವನ್ನು ಆಚರಿಸಲು ಒಳಗಿನ ಲೋಕಕ್ಕೆ ಹೋಗುತ್ತಿದ್ದಾರೆ. ಕ್ಯಾಮರಾಮ್ಯಾನ್​ ಯುಸೂಫ್​ ಜೊತೆ ಚಾಂದ್​ ನವಾಬ್​​ ಇಂಡಸ್​ ನ್ಯೂಸ್​ ಕರಾಚಿ’

ಅನೇಕ ವರ್ಷಗಳ ಹಿಂದೆ, ಪಾಕಿಸ್ತಾನಿ ಪತ್ರಕರ್ತ ಚಾಂದ್​ ನವಾಬ್​ ತಾವು ಮಾಡುವ ಈದ್​ ಹಬ್ಬದ ಸಂಬಂಧ ಪುಟ್ಟ ಸ್ಟೋರಿಯೊಂದು ತಮ್ಮನ್ನು ಈ ಮಟ್ಟಕ್ಕೆ ಜನಪ್ರಿಯಗೊಳಿಸಬಹುದು ಎಂದು ಕನಸಲ್ಲೂ ಊಹಿಸಿರಲು ಸಾಧ್ಯವೇ ಇಲ್ಲ.

ಜನರ ಜೊತೆ ಮಾತನಾಡುವ ಅವರು ಹೇಗೆ ಗಲಿಬಿಲಿಗೆ ಒಳಗಾದ್ರು ಅನ್ನೋದನ್ನ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್​ ಆಯ್ತು ಅಂದರೆ ಸಲ್ಮಾನ್​ ಖಾನ್​​ ಅಭಿನಯದ ಭಜರಂಗಿ ಭಾಯಿಜಾನ್​ ಸಿನಿಮಾದಲ್ಲಿ ನಟ ನವಾಜುದ್ದೀನ್​ ಸಿದ್ದಿಕಿ ಚಾಂದ್​ ನವಾಬರ ಪಾತ್ರವನ್ನು ನಿರ್ವಹಿಸಿದ್ದರು.

ಆದರೆ ಇದೀಗ ಈ ವಿಡಿಯೋ ನಿಮ್ಮದು ಕೂಡ ಆಗಬಹುದು…! ಯೆಸ್, ಏಕೆಂದರೆ ಎನ್​ಎಫ್​ಟಿ ಈ ವಿಡಿಯೋವನ್ನು ಹರಾಜಿಗೆ ಇಟ್ಟಿದೆ. Foundation. App ವೆಬ್​ಸೈಟ್​ನಲ್ಲಿ ನಿಮಗೆ ಈ ವಿಡಿಯೋಗೆ ಹರಾಜಿಗಿದೆ. ಈ ಹರಾಜಿನಲ್ಲಿ ಭಾಗಿಯಾಗಲು ನೀವು ಹಾಕಬಹುದಾದ ಕನಿಷ್ಟ ಹರಾಜು ಮೊತ್ತ 46 ಲಕ್ಷ ರೂಪಾಯಿ..!

ನಾನು ಚಾಂದ್​ ನವಾಬ್​, ಪತ್ರಕರ್ತ, ವೃತ್ತಿಯಲ್ಲಿ ವರದಿಗಾರ. 2008ರಲ್ಲಿ ರೈಲ್ವೆ ನಿಲ್ದಾಣವೊಂದರಲ್ಲಿ ಈದ್ ಹಬ್ಬದ ಸಂಬಂಧ ಮಾಡುತ್ತಿದ್ದ ಸ್ಟೋರಿಯ ವಿಡಿಯೋವೊಂದು ವೈರಲ್​ ಆಗಿತ್ತು.

ನಾನು ವರದಿ ನೀಡುತ್ತಿದ್ದ ವೇಳೆ ಜನರು ನನಗೆ ಕಿರಿಕಿರಿ ಮಾಡಿದರು. ಇದರಿಂದ ನನಗೆ ಮಾತು ತೊದಲಾಯಿತು. ಇದೇ ಕಾರಣಕ್ಕೆ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. 2016ರಲ್ಲಿ ನನ್ನ ವಿಡಿಯೋದಿಂದ ಪ್ರೇರಣೆ ಪಡೆದ ಫಿಲಂ ಮೇಕರ್​​ ಕಬೀರ್​ ಖಾನ್​​ ಪ್ರಸಿದ್ಧ ಭಜರಂಗಿ ಭಾಯಿಜಾನ್​ ಸಿನಿಮಾದಲ್ಲಿ ನನ್ನ ಹೆಸರಿನ ಪಾತ್ರವನ್ನು ನವಾಜುದ್ದೀನ್​ ಸಿದ್ದಕಿ ಅವರಿಂದ ನಿರ್ವಹಿಸುವ ಮೂಲಕ ಮತ್ತೊಮ್ಮೆ ನನ್ನನ್ನು ಫೇಮಸ್​ ಮಾಡಲಾಯ್ತು. ರಾತ್ರೋರಾತ್ರಿ ನಾನು ಪಾಕಿಸ್ತಾನ ಹಾಗೂ ಭಾರತದಲ್ಲಿ ಸುದ್ದಿಯಲ್ಲಿದ್ದೆ ಎಂದು ವಿವರಣೆ ನೀಡಲಾಗಿದೆ.

ಈ ವಿಡಿಯೋ ಹರಾಜಿಗಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆಯೇ ಅನೇಕರು ಇದನ್ನು ಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...