alex Certify BIG NEWS: ಕೊರೊನಾ ಲಸಿಕೆ ಕುರಿತಂತೆ ಮಹತ್ವದ ಮಾಹಿತಿ – ಲಸಿಕೆ ಪಡೆದವರು ಸೋಂಕಿಗೊಳಗಾದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೇವಲ ಶೇ.0.06 ಮಾತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಕುರಿತಂತೆ ಮಹತ್ವದ ಮಾಹಿತಿ – ಲಸಿಕೆ ಪಡೆದವರು ಸೋಂಕಿಗೊಳಗಾದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೇವಲ ಶೇ.0.06 ಮಾತ್ರ

ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ನಂತರ ಕೇವಲ ಶೇಕಡ 0.06 ಜನರಿಗೆ ಮಾತ್ರ ಆಸ್ಪತ್ರೆ ಅಗತ್ಯವಿರುತ್ತದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಶೇಕಡ 97.38 ರಷ್ಟು ಜನರು ವೈರಸ್ ನಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಅಧ್ಯಯನ ಬಹಿರಂಗಪಡಿಸಿದೆ.

ಕೋವಿಡ್-19 ವ್ಯಾಕ್ಸಿನೇಷನ್ ನಂತರ ಸೋಂಕುಗಳು(ಬ್ರೇಕ್ ಥ್ರೂ ಸೋಂಕು) ಆವರ್ತನ ಮೌಲ್ಯಮಾಪನ ಮಾಡಿದ ಅಧ್ಯಯನದ ಫಲಿತಾಂಶಗಳನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ. ಕೋವಿಡ್ ವ್ಯಾಕ್ಸಿನೇಷನ್ ನಂತರ ಕೇವಲ 0.06 ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನ ತಿಳಿಸಿದೆ.

ಕೋವಿಡ್ ಲಸಿಕೆ ಹಾಕಿದ ಮೊದಲ 100 ದಿನಗಳಲ್ಲಿ ದೆಹಲಿಯ ಇಂದ್ರಪ್ರಸ್ಥ ಆಸ್ಪತ್ರೆಯಿಂದ ರೋಗ ಲಕ್ಷಣವಿಲ್ಲದ ಕೋವಿಡ್-19 ಪಾಸಿಟಿವ್ ಇದ್ದ ಸೋಂಕಿತ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ.

ಅಪೋಲೋ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ ಡಾ. ಅನುಪಮ್ ಸಿಬಲ್ ಸುದ್ದಿ ಸಂಸ್ಥೆಯೊಂದಕ್ಕೆ ಈ ಬಗ್ಗೆ ಮಾಹಿತಿ ನೀಡಿ, ಭಾರತದಲ್ಲಿ ಇತ್ತೀಚೆಗೆ ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡಿದೆ. ವ್ಯಾಕ್ಸಿನೇಷನ್ ಡ್ರೈವ್ ಪ್ರಗತಿಯಲ್ಲಿದೆ. ವ್ಯಾಕ್ಸಿನೇಷನ್ ನಂತರದ ವರದಿಗಳು ಬಂದಿವೆ. ಇವುಗಳನ್ನು ವ್ಯಾಕ್ಸಿನೇಷನ್ ನಂತರದ ಸೋಂಕುಗಳು ಎಂದು ಪರಿಗಣಿಸಲಾಗಿದ್ದು, ಕೆಲವು ವ್ಯಕ್ತಿಗಳಲ್ಲಿ ಭಾಗಶಃ ಮತ್ತು ಪೂರ್ಣ ವ್ಯಾಕ್ಸಿನೇಷನ್ ಮಾಡಿದ ನಂತರ ಈ ಸೋಂಕುಗಳು ಸಂಭವಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರರು ಆಗಿರುವ ಸಿಬಲ್ ಅವರು, ಕೋವಿಡ್ 19 ವ್ಯಾಕ್ಸಿನೇಷನ್ ಶೇಕಡ 100 ರಷ್ಟು ರೋಗನಿರೋಧಕ ಶಕ್ತಿಯನ್ನು ಒದಗಿಸುವುದಿಲ್ಲ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಪೂರ್ಣ ರೋಗನಿರೋಧಕತೆ ನಂತರವೂ ಗಂಭೀರ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕೇವಲ ಶೇಕಡ 0.06 ರಷ್ಟು ಇದೆ ಎಂದು ಹೇಳಲಾಗಿದೆ.

ವ್ಯಾಕ್ಸಿನೇಷನ್ ನಂತರದಲ್ಲಿ ಸೋಂಕುಗಳು ಅಲ್ಪ ಪ್ರಮಾಣದಲ್ಲಿ ಮಾತ್ರ ಕಾಣಿಸುತ್ತವೆ. ತೀವ್ರತರ ಕಾಯಿಲೆಗೆ ಕಾರಣವಾಗದ ಪ್ರಾಥಮಿಕ ಸಣ್ಣ ಸೋಂಕುಗಳು ಇವಾಗಿವೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಇಂತಹವವರಿಗೆ ಐಸಿಯು ಅಗತ್ಯವಿರುವುದಿಲ್ಲ ಅಥವಾ ಸಾವು ಸಂಭವಿಸಲ್ಲ. ಅಧ್ಯಯನದಲ್ಲಿ ಕಂಡುಕೊಂಡ ಮಾಹಿತಿಯಂತೆ ವ್ಯಾಕ್ಸಿನೇಷನ್ ರಕ್ಷಣೆ ಒದಗಿಸುತ್ತದೆ.

3,235 ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ. ಇವರಲ್ಲಿ 85 ಮಂದಿ ಅಧ್ಯಯನದ ಅವಧಿಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಇವರ ಪೈಕಿ 65 ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿತ್ತು. 20 ಮಂದಿಗೆ ಭಾಗಶಃ ಲಸಿಕೆ ನೀಡಲಾಗಿತ್ತು ಎಂದು ಅಧ್ಯಯನದ ವಿವರವನ್ನು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...