alex Certify ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೊಲೀಸ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೊಲೀಸ್ ಅರೆಸ್ಟ್

ಚಾಮರಾಜನಗರ: ಪ್ರೀತಿಸಿದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪೊಲೀಸ್ ಕಾನ್ ಸ್ಟೇಬಲ್ ನನ್ನು ರಾಮಸಮುದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂತೆಮರಹಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ ಸ್ಟೇಬಲ್ ಇರಸವಾಡಿ ಸುತ್ತೂರಿನವರಾಗಿದ್ದಾರೆ. ಅನೇಕ ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸಿದ್ದ ಕಾನ್ ಸ್ಟೇಬಲ್ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದು, ಕೆಲವು ತಿಂಗಳ ಹಿಂದೆ ಪೊಲೀಸ್ ಕೆಲಸ ಸಿಗುತ್ತಿದ್ದಂತೆ ದೂರವಾಗಿದ್ದರು ಎನ್ನಲಾಗಿದೆ.

ನೊಂದ ಯುವತಿ ಸೋಮವಾರ ಅತ್ಯಾಚಾರದ ದೂರು ದಾಖಲಿಸಿದ್ದು, ಮಂಗಳವಾರ ಆರೋಪಿ ಪೊಲೀಸ್ ಕಾನ್ ಸ್ಟೇಬಲ್ ನನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...