alex Certify SHOCKING: ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಮಲತಂದೆ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಮಲತಂದೆ ಅರೆಸ್ಟ್

ಚಾಮರಾಜನಗರ: ಚಾಮರಾಜನಗರ ಠಾಣೆ ಪೊಲೀಸರು 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಲತಂದೆಯನ್ನು ಬಂಧಿಸಿದ್ದಾರೆ.

ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕುರಿತಾಗಿ ತಾಯಿ ದೂರು ನೀಡಿದ್ದು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು 45 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. 5 ವರ್ಷದ ಹೆಣ್ಣು ಮಗುವಿನ ತಾಯಿಗೆ ಆರೋಪಿ ಎರಡನೇ ಪತಿಯಾಗಿದ್ದಾನೆ. ಕಿರುಕುಳ ತಾಳದೇ ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ, ಮೈಸೂರಿನ ಆರೋಪಿಯನ್ನು ಎರಡನೇ ಮದುವೆಯಾಗಿದ್ದರು.

ಮದ್ಯಪಾನ ಮಾಡಿ ಮನೆ ಬರುತ್ತಿದ್ದ ಆರೋಪಿ ಜಗಳವಾಡುತ್ತಿದ್ದರಿಂದ ಇತ್ತೀಚೆಗೆ ತವರುಮನೆಗೆ ಬಂದಿದ್ದು, ಮಹಿಳಾ ಠಾಣೆಗೆ ದೂರು ನೀಡಿದ್ದರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...