alex Certify ವೆಚ್ಚ ಸರಿದೂಗಿಸಲು 5.03 ಲಕ್ಷ ಕೋಟಿ ರೂ. ಸಂಗ್ರಹಕ್ಕೆ ಮುಂದಾದ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೆಚ್ಚ ಸರಿದೂಗಿಸಲು 5.03 ಲಕ್ಷ ಕೋಟಿ ರೂ. ಸಂಗ್ರಹಕ್ಕೆ ಮುಂದಾದ ಕೇಂದ್ರ ಸರ್ಕಾರ

ಮಾರ್ಚ್ 2022ಕ್ಕೆ ಅಂತ್ಯವಾಗಲಿರುವ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ಅರ್ಧದ ವೆಚ್ಚ ಸರಿದೂಗಿಸಲು ಕೇಂದ್ರ ಸರ್ಕಾರವು 5.03 ಲಕ್ಷ ಕೋಟಿ ರೂಪಾಯಿಗಳನ್ನು ಮಾರುಕಟ್ಟೆಯಿಂದ ಸಂಗ್ರಹಿಸಲು ಮುಂದಾಗಿದೆ.

ಈ ಕುರಿತು ರಿಸರ್ವ್ ಬ್ಯಾಂಕ್ ಜೊತೆಗೆ ಸಮಾಲೋಚನೆ ನಡೆಸಿದ ಕೇಂದ್ರ ಸರ್ಕಾರ, ಎರಡನೇ ಅರ್ಧದ ವಿತ್ತೀಯ ಲೆಕ್ಕಾಚಾರಗಳನ್ನು ಸರಿದೂಗಿಸಲು ಮುಂದಾಗಿದೆ.

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿಯ 9.5%ರಷ್ಟಿರುವ ವಿತ್ತೀಯ ಕೊರತೆಯನ್ನು 6.8%ಗೆ ತಗ್ಗಿಸಲು ಈ ವರ್ಷದ ಬಜೆಟ್‌ನಲ್ಲಿ ಗುರಿ ಹೊಂದಲಾಗಿದೆ.

ಪ್ರಸಕ್ತ ವರ್ಷದ ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ವಿತರಿಸಲು ಸತತ ಸಾಲದ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಿರುವ ಹಣವೂ ಈ ಮೊತ್ತದಲ್ಲಿ ಸೇರಿದೆ.

ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಸಾಲ ಪಡೆಯಲು ಅಂದಾಜಿಸಲಾಗಿದ್ದ 7.24 ಲಕ್ಷ ಕೋಟಿ ರೂ.ಗಳಲ್ಲಿ 7.02 ಲಕ್ಷ ಕೋಟಿ ರೂ.ಗಳನ್ನು ಪೂರ್ಣಗೊಳಿಸಲಾಗಿದೆ. ಪೂರ್ಣ ವಿತ್ತೀಯ ವರ್ಷದಲ್ಲಿ 12.05 ಲಕ್ಷ ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆಯಲು ಸರ್ಕಾರ ಈ ಬಜೆಟ್‌ ವೇಳೆ ಗುರಿ ಇಟ್ಟುಕೊಂಡಿತ್ತು.

21 ಸಾಪ್ತಾಹಿಕ ಕಂತುಗಳಲ್ಲಿ ತಲಾ 23,000-24,000 ಕೋಟಿ ರೂ.ಗಳಂತೆ ವಿತ್ತೀಯ ವರ್ಷದ ಎರಡನೇ ಅವಧಿಯಲ್ಲಿ ಸಾಲ ಪಡೆಯಲು ಸರ್ಕಾರ ಯೋಜನೆ ರೂಪಿಸಿಕೊಂಡಿದೆ. ಈ ಸಾಲವನ್ನು 2, 5, 10, 14, 30 ಹಾಗೂ 40 ವರ್ಷಗಳ ಭದ್ರತೆಯ ಹಾಗೂ ತೇಲುವ ದರದ ಬಾಂಡ್‌ಗಳ ಮೇಲೆ ಪಡೆಯಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...