alex Certify ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್-ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಮಾಲೀಕರಿಗೆ ಮತ್ತೊಂದು ಶಾಕ್: ಥರ್ಡ್-ಪಾರ್ಟಿ ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಸಿದ್ಧತೆ

ದುಬಾರಿ ದುನಿಯಾದಲ್ಲಿ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಮುಂಬರುವ ಹಣಕಾಸು ವರ್ಷದಿಂದ ಥರ್ಡ್-ಪಾರ್ಟಿ ಮೋಟಾರು ವಿಮಾ ಪ್ರೀಮಿಯಂ ಹೆಚ್ಚಿಸಲು ಸಿದ್ಧತೆ ನಡೆದಿದೆ.

ಎಪ್ರಿಲ್ 1 ರಿಂದ ಕಾರು ಅಥವಾ ದ್ವಿಚಕ್ರ ವಾಹನ ಖರೀದಿ ದುಬಾರಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ.

ಉದ್ದ ಕೂದಲು ಪಡೆಯಬೇಕಾ….? ಹೀಗೆ ಮಾಡಿ

ಕರಡು ಅಧಿಸೂಚನೆಯ ಪ್ರಕಾರ 1000 ಸಿಸಿ (ಕ್ಯೂಬಿಕ್ ಸಾಮರ್ಥ್ಯ) ಎಂಜಿನ್ ಹೊಂದಿರುವ ಖಾಸಗಿ ಕಾರಿಗೆ 2019-20 ರಲ್ಲಿ 2,072 ರೂ. ಪ್ರೀಮಿಯಂ ಇದ್ದು,‌ 2,094 ರೂ.ಗೆ ಪರಿಷ್ಕರಣೆಯಾಗಬಹುದು.‌‌ ಅದೇ ರೀತಿ, 1,000 ಸಿಸಿಯಿಂದ 1,500 ಸಿಸಿಗೆ 3,221 ರೂ.ನಿಂದ 3,416 ರೂ.ಗೆ, 1,500 ಸಿಸಿಗಿಂತ ಹೆಚ್ಚಿನ ಕಾರುಗಳ ಮಾಲೀಕರು 7,897 ರೂಪಾಯಿಗಳ ಪ್ರೀಮಿಯಂ ಅಗಬಹುದು‌

150ರಿಂದ 350 ಸಿಸಿವರೆಗಿನ‌ ದ್ವಿಚಕ್ರ ವಾಹನಗಳಿಗೆ 1,366 ರೂ, ಪ್ರೀಮಿಯಂ, 350 ಸಿಸಿಗಿಂತ ಹೆಚ್ಚಿನ ದ್ವಿಚಕ್ರ ವಾಹನಗಳಿಗೆ‌ ಪರಿಷ್ಕೃತ ಪ್ರೀಮಿಯಂ 2,804 ರೂ. ಆಗಿರುತ್ತದೆ.

ಕರಡು ಅಧಿಸೂಚನೆಯ ಪ್ರಕಾರ ಖಾಸಗಿ ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಸರಕು ಸಾಗಿಸುವ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮತ್ತು ಎಲೆಕ್ಟ್ರಿಕ್ ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಶೇ.ಹದಿನೈದು ರಿಯಾಯಿತಿ ಪ್ರಸ್ತಾಪಿಸಲಾಗಿದೆ. ಹೈಬ್ರಿಡ್ ಎಲೆಕ್ಟ್ರಿಕ್‌ಗಾಗಿ ಪ್ರೀಮಿಯಂ ದರಗಳಲ್ಲಿ ಶೇಕಡಾ 7.5 ರಷ್ಟು ರಿಯಾಯಿತಿ ನಿರೀಕ್ಷಿಸಲಾಗಿದೆ.

Centre proposes hike in third-party motor insurance premium from next fiscal

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...