alex Certify ಬೆರಗುಗೊಳಿಸುವಂತಿದೆ ನವೀಕರಣಗೊಂಡ ʼಸೆಂಟ್ರಲ್​ ವಿಸ್ಟಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುವಂತಿದೆ ನವೀಕರಣಗೊಂಡ ʼಸೆಂಟ್ರಲ್​ ವಿಸ್ಟಾʼ

ದೇಶದ ರಾಜಧಾನಿಯಲ್ಲಿನ ಸೆಂಟ್ರಲ್​ ವಿಸ್ಟಾ ಅವೆನ್ಯೂ ನವೀಕರಣಗೊಂಡಿದ್ದು ಪುನರಾರಂಭಗೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಈವೆಂಟ್​ ಅನ್ನು ಉದ್ಘಾಟಿಸಲಿದ್ದಾರೆ. ಈ ನಡುವೆ ಅಲ್ಲಿ ಆಗಿರುವ ಬೆಳವಣಿಗೆಯ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗಿವೆ.

ಹಿರಿಯ ಅಧಿಕಾರಿಯ ಪ್ರಕಾರ, 74 ಐತಿಹಾಸಿಕ ಲೈಟ್​ ಪೋಲ್​ಗಳು ಮತ್ತು ಎಲ್ಲಾ ಚೈನ್​ ಲಿಂಕ್​ಗಳನ್ನು ಮರುಸ್ಥಾಪಿಸಲಾಗಿದೆ. ಸಂದರ್ಶಕರಿಗೆ ಈ ಸ್ಥಳವು ಯಾವಾಗಲೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಕಡೆಗಳಲ್ಲಿ 900 ಕ್ಕೂ ಹೆಚ್ಚು ಹೊಸ ಲೈಟ್​ ಕಂಬಗಳನ್ನು ಸೇರಿಸಲಾಗಿದೆ. ಇವು ರಾಜಪಥ, ಕಾಲುವೆಗಳು, ಮರಗಳ ಸಾಲುಗಳು, ಹೊಸದಾಗಿ ರಚಿಸಲಾದ ಪಾರ್ಕಿಂಗ್ ಬೇಗಳು ಮತ್ತು ಇಂಡಿಯಾ ಗೇಟ್​ ಆವರಣದ ಉದ್ದಕ್ಕೂ ಇವೆಲ್ಲ ನೆಲೆಗೊಂಡಿವೆ.

ನವೀಕರಣ ಯೋಜನೆಯು ಪಾರಂಪರಿಕ ಮೌಲ್ಯಗಳನ್ನು ಉಳಿಸಿ, ಮರುಸ್ಥಾಪಿಸುವಾಗ ಆಧುನಿಕರಿಸಲಾಗಿದೆ. ಆವರಣದ ಐತಿಹಾಸಿಕ ಪಾತ್ರವನ್ನು ಕಾಪಾಡಿಕೊಳ್ಳಲು ಕಾಂಕ್ರೀಟ್​ ಬೊಲ್ಲಾರ್ಡ್​ಗಳ ಬದಲು 1000 ಪ್ಲಸ್​ ಬಿಳಿ ಮರಳುಗಲ್ಲಿನ ಬೊಲ್ಲಾರ್ಡ್​ಗಳೊಂದಿಗೆ ಬದಲಾಯಿಸಲಾಗಿದೆ.

ರಾಜಪಥದ ಉದ್ದಕ್ಕೂ ಪಾದಚಾರಿ ಮಾರ್ಗವನ್ನು ದೃಢವಾದ ಮತ್ತು ಬಾಳಿಕೆ ಬರುವ ವಸ್ತುಗಳಿಂದ ಸುಗಮಗೊಳಿಸಲಾಗಿದೆ.

ರಾಜಪಥ, ಹುಲ್ಲುಹಾಸು, ಕಾಲುವೆಗಳ ಉದ್ದಕ್ಕೂ ಮತ್ತು ಅಡ್ಡಲಾಗಿ ಮತ್ತು ಇಂಡಿಯಾ ಗೇಟ್​ ಆವರಣದಲ್ಲಿ 16.5 ಕಿಮೀ ಪಾದಚಾರಿ ಮಾರ್ಗ ಸೇರಿಸಲಾಗಿದೆ.

ಅವೆನ್ಯೂ ಉದ್ದಕ್ಕೂ ಎಂಟು ವಿಭಿನ್ನ ಸ್ಥಳಗಳಲ್ಲಿ ಟಾಯ್ಲೆಟ್​ಗಳು, ವೆಂಡಿಂಗ್​ ಕಿಯೋಸ್ಕ್​ಗಳು ಮತ್ತು ಕುಡಿಯುವ ನೀರಿನ ಸೌಲಭ್ಯ ಇರುವ ಬ್ಲಾಕ್​ಗಳನ್ನು ಸೇರಿಸಲಾಗಿದೆ.

ಒಟ್ಟು 64 ಮಹಿಳಾ ಶೌಚಾಲಯಗಳು, 32 ಪುರುಷ ಶೌಚಾಲಯಗಳು ಮತ್ತು 10 ತೆರೆದ ಶೌಚಾಲಯಗಳು, ವಿವಿಧ ಸ್ಥಳಗಳಲ್ಲಿ ಏಳು ಸೇಲ್ಸ್ ಪ್ಲಾಜಾಗಳನ್ನು ತೆರೆಯಲಾಗುತ್ತಿದೆ.

ರಾಜಕಾಲುವೆಗಳ ಮೇಲೆ 16 ಶಾಶ್ವತ ಸೇತುವೆ ನಿರ್ಮಿಸಲಾಗಿದ್ದು, ಕಾಲುವೆಗಳ ಆಚೆಗಿನ ಜಾಗವನ್ನು ಸಾರ್ವಜನಿಕರ ಬಳಕೆಗೆ ಅನುಕೂಲವಾಗಿದೆ. ಈ ಜಾಗದ ಒಂದು ಭಾಗವನ್ನು ಬಸ್ಸುಗಳು, ದ್ವಿಚಕ್ರ ವಾಹನಗಳು, ಕಾರುಗಳು, ಅಪ್ಲಿಕೇಶನ್​ ಆಧಾರಿತ ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳಿಗೆ ಪಾರ್ಕಿಂಗ್ ಮಾಡಲು ವಿನ್ಯಾಸಗೊಳಿಸಲಾಗಿದೆ.

ಪಾದಚಾರಿಗಳ ಸಂಚಾರದಿಂದ ವಾಹನ ದಟ್ಟಣೆಯನ್ನು ಪ್ರತ್ಯೇಕಿಸಲು ಜನನಿಬಿಡ ಜಂಕ್ಷನ್​ಗಳಲ್ಲಿ ನಾಲ್ಕು ಹೊಸ ಪಾದಚಾರಿ ಅಂಡರ್​ಪಾಸ್​ಗಳನ್ನು ನಿರ್ಮಿಸಲಾಗಿದ್ದು, ರಸ್ತೆ ದಾಟಲು ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...