alex Certify ಬೆಡ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿ 6 ವರ್ಷ ಚಿತ್ರಹಿಂಸೆ ನೀಡಿದ ವ್ಯಕ್ತಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಡ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿ 6 ವರ್ಷ ಚಿತ್ರಹಿಂಸೆ ನೀಡಿದ ವ್ಯಕ್ತಿ ಅರೆಸ್ಟ್

ಆರು ವರ್ಷಗಳಿಂದ ಒತ್ತೆಯಾಳಾಗಿದ್ದ ಯುವತಿಯನ್ನು ಪೊಲೀಸರು ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಯುವತಿಗೆ ಮೋಸ ಮಾಡಿ ಆಕೆಯನ್ನು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಲಕ್ನೋಗೆ ಕರೆ ತಂದಿದ್ದ ಆರೋಪಿ, ಬೆಡ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿ,‌ ಬೆದರಿಸಿ ಅತ್ಯಾಚಾರವೆಸಗುತ್ತಿದ್ದನಂತೆ.

ನಕಲಿ ಅಂಕಪಟ್ಟಿ ತಯಾರಿ ಪ್ರಕರಣದಲ್ಲಿ ಆರೋಪಿ ಮನೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆ ನಂತ್ರ ಯುವತಿಯ ಒತ್ತೆಯಾಳು ಪ್ರಕರಣ ಬೆಳಕಿಗೆ ಬಂದಿದೆ. ಪೀಡಿತೆಗೆ 22 ವರ್ಷ ವಯಸ್ಸಾಗಿದೆ. ಆಕೆಗೆ  2 ವರ್ಷದ ಮಗುವಿದೆ. ಉನ್ನತ ಶಿಕ್ಷಣ ಕೊಡಿಸುವುದಾಗಿ ಮನೀಶ್, ಪೀಡಿತೆಯನ್ನು ಇಲ್ಲಿಗೆ ಕರೆತಂದಿದ್ದ ಎನ್ನಲಾಗಿದೆ. ಆದ್ರೆ ಶಿಕ್ಷಣ ಕೊಡಿಸದೆ ಆಕೆ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ.

ಬಾತ್ ರೂಮ್ ಹಾಗೂ ಬೆಡ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿದ್ದ ಮನೀಶ್, ಪೀಡಿತೆ ಮೇಲೆ ಅತ್ಯಾಚಾರವೆಸಗುತ್ತಿದ್ದನಂತೆ. ವಿಷ್ಯವನ್ನು ಬಾಯ್ಬಿಟ್ಟರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸುತ್ತಿದ್ದನಂತೆ. ಮನೀಶ್ ಬಂಧನವಾಗಿದೆ ಎಂದ ಮೇಲೆ ಯುವತಿ ಸತ್ಯ ಬಾಯ್ಬಿಟ್ಟಿದ್ದಾಳೆ. ಮಹಿಳಾ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಸಂತ್ರಸ್ತೆಯನ್ನು ಮನೆಯವರಿಗೆ ತಲುಪಿಸುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ. ಮನೀಶ್ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...