alex Certify ಸಹೋದರಿಯರು ಶುರು ಮಾಡಿದ್ದ ಪಬ್‌ ನಲ್ಲಿ ತನ್ನಿಂತಾನೇ ಚಲಿಸಿದ ಪೆನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿಯರು ಶುರು ಮಾಡಿದ್ದ ಪಬ್‌ ನಲ್ಲಿ ತನ್ನಿಂತಾನೇ ಚಲಿಸಿದ ಪೆನ್…!

 

ಸಹೋದರಿಯರಾದ ರಿಚೆಲ್ ಸ್ಟಾಕ್ಸ್ ಮತ್ತು ಆಶ್ಲೀಗ್ ನೈಸ್‌ಬಿಟ್ ಅವರು ಆಗಸ್ಟ್‌ನಲ್ಲಿ ಪಬ್ ಶುರು ಮಾಡಿದ್ದರು. ಇದರಿಂದ ಲೈಫ್ ಸೆಟಲ್ ಆಯ್ತು ಎಂದು ನೆಮ್ಮದಿಯಾಗಿರುವಾಗಲೆ, ಡಾರ್ಲಿಂಗ್ಟನ್‌ನ ಮಾರ್ಪೆಟ್ ನಲ್ಲಿರುವ ಕಟ್ಟದಲ್ಲಾಗುತ್ತಿರುವ ವಿಚಿತ್ರ ಘಟನೆಗಳು ಈ ಸಹೋದರಿಯರ ಮನಶಾಂತಿಯನ್ನ ಹಾಳು ಮಾಡಿದೆ.

ಪಬ್‌ನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿವೆ. ಇಲ್ಲಿ ಸಂಭವಿಸುತ್ತಿರುವ ಭಯಾನಕ ಘಟನೆಗಳಿಂದ ಸಿಬ್ಬಂದಿಗಳು ಕೆಲಸಕ್ಕೆ ಬರಲು ಅಥವಾ ಸೆಲ್ಲಾರ್‌ಗೆ ಹೋಗಲು ಹೆದರುತ್ತಿದ್ದಾರೆ ಎಂದು ಇಬ್ಬರು ಯುಕೆಯ ಸ್ಥಳೀಯ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದಾರೆ.

ಒಂದು ರಾತ್ರಿ, ಕೆಳಗಿನ ಮಹಡಿಯಲ್ಲಿ ಜೋರಾಗಿ ಬಡಿಯುತ್ತಿರುವುದನ್ನು ಕೇಳಿಸಿಕೊಂಡ ನಂತರ ಯಾರೋ ಕುಡುಕ ಪಬ್ ಮೇಲೆ ದಾಳಿ ಮಾಡಿರಬಹುದು ಎಂದು ಭಯಭೀತರಾಗಿ ಪೊಲೀಸರಿಗೆ ಕರೆ ಮಾಡಿದೆವು.

ಪೊಲೀಸರು ಬಂದು ಇಡೀ ಆವರಣವನ್ನು ಪರೀಕ್ಷಿಸಿದಾಗ ಕಟ್ಟಡ ಸಂಪೂರ್ಣ ಖಾಲಿಯಾಗಿತ್ತು. ಈ ಘಟನೆ ಆದ ಮೇಲೆ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಾರ್ ಹಿಂದೆ ಮಾನವನಂತೆ ಕಾಣುವ ನೆರಳುಗಳು ಕಂಡುಬಂದವು. ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ ಅಂದು ಕಟ್ಟಡದಲ್ಲಿ ಯಾರೋ ಇದ್ದರು ಎಂದು ರಿಚೆಲ್ ಹೇಳಿದ್ದಾರೆ.

ಈ ಪಬ್ ಕಟ್ಟಡದಲ್ಲಿ ಅಸಾಧಾರಣ ಶಕ್ತಿ ಇದೆ ಎಂದು ನಂಬಿರುವ ಈ ಸಹೋದರಿಯರು, ಈ ಘೋರ ಘಟನೆಯ ಎರಡು ದಿನಗಳ ನಂತರ, ತಾವು ಅಂದುಕೊಂಡಿರುವುದು ನಿಜವೆ ಎಂದು ಪರೀಕ್ಷಿಸಲು ಮುಂದಾಗಿದ್ದಾರೆ‌. ತನ್ನ ಕೈಯಲ್ಲಿ ಪೆನ್ ಹಿಡಿದ ಆಶ್ಲಿಗ್ , ಇಲ್ಲಿ ಯಾರಾದರೂ ಇದ್ದರೆ, ಈ ಪೆನ್ನನ್ನು ಸರಿಸಿ ಎಂದು ಹೇಳಿದ್ದಾರೆ.

ಹಾಗೇ ಹೇಳಿದ ಎರಡು ಸೆಕೆಂಡುಗಳ ನಂತರ ಪೆನ್ ತಿರುಗಲು ಪ್ರಾರಂಭಿಸಿತು ಎಂದು ಆಶ್ಲೀಗ್ ಹೇಳಿದ್ದಾರೆ. ಪೆನ್ ಇದ್ದಕ್ಕಿದ್ದಂತೆ ತನ್ನಷ್ಟಕ್ಕೆ ತಿರುಗಲು ಪ್ರಾರಂಭಿಸಿದ ನಿಖರವಾದ ಕ್ಷಣವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾವು ಕೊಂಡುಕೊಂಡಿರುವ ಕನಸಿನ ಆಸ್ತಿ, ಅಸಾಧಾರಣ ಶಕ್ತಿಗಳ ಜೇನುಗೂಡು. ಈ ಪ್ರದೇಶದಲ್ಲಿ ತನ್ನಷ್ಟಕ್ಕೆ ತಾನೇ ಏನೆನೋ ಘಟನೆಗಳು ಸಂಭವಿಸುತ್ತವೆ. ವಸ್ತುಗಳು ಇಟ್ಟ ಜಾಗದಲ್ಲಿರುವುದಿಲ್ಲ. ಪ್ರಿಜ್ ಬಾಗಿಲು ತಾನಾಗೇ ತಾನೇ ತೆರದುಕೊಳ್ಳುತ್ತವೆ. ಹೆಜ್ಜೆಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತಿರುವ ಇಬ್ಬರು ಸಹೋದರಿಯರು ಸಧ್ಯ ಯುಕೆಯಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ‌. ಇವರ ಪೆನ್ ತಿರುಗಿಸಿದ ವಿಡಿಯೋ ವೈರಲ್ ಆಗುತ್ತಿದೆ, ಸ್ಥಳೀಯ ಮಾಧ್ಯಮಗಳು ಇವರ ಕಥೆಯನ್ನು ಪ್ರಸಾರ ಮಾಡುತ್ತಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...