alex Certify ತನ್ನ ಪ್ಯಾಡಲ್‌ಬೋರ್ಡ್‌ ಕಡಿಯಲು ಬಂದ ಮೊಸಳೆಯನ್ನು ನಾಜೂಕಾಗಿ ದೂರ ಸಾಗಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಪ್ಯಾಡಲ್‌ಬೋರ್ಡ್‌ ಕಡಿಯಲು ಬಂದ ಮೊಸಳೆಯನ್ನು ನಾಜೂಕಾಗಿ ದೂರ ಸಾಗಿಸಿದ ಮಹಿಳೆ

ಕಾಡಿನ ಮಧ್ಯದ ಸಣ್ಣ ಕೆರೆಯಲ್ಲಿ ದೋಣಿ ವಿಹಾರದಲ್ಲಿದ್ದವಳಿಗೆ ಎದುರಾಯ್ತು ಮೊಸಳೆ! ಹಾಗಂತ ಆಕೆ ಕಿರುಚಾಡಿ, ಗಾಬರಿಯಿಂದ ಕುಣಿದು ದೋಣಿಯು ಮಗುಚಿಕೊಂಡು ಬೀಳುವಂತೆ ಮಾಡಿಕೊಳ್ಳಲಿಲ್ಲ.

ಸಮಾಧಾನವಾಗಿ, ಮೊಸಳೆಯನ್ನೇ ಮಾತನಾಡಿಸಲು ಆರಂಭಿಸಿದಳು. ’’ಯಾಕೆ, ನನ್ನ ತಂಟೆಗೆ ಬರುತ್ತಿದ್ದೀಯಾ? ಯಾಕೆ, ನನ್ನ ಪ್ಯಾಡಲ್‌ಬೋರ್ಡ್‌ ದೋಣಿಯ ಮೇಲೆ ನಿನ್ನ ಕಣ್ಣು? ಕಡಿಯುತ್ತೀಯಾ,’’ ಎನ್ನುತ್ತಾ ಸಮಾಧಾನ ಚಿತ್ತಳಾಗಿ ಮಾತನಾಡುತ್ತಿರುವಾಗಲೇ ಆಕೆಯ ಬದಿಯಿಂದ ಮೊಸಳೆ ಈಜುತ್ತಾ ಸಾಗಿ ಹೋಯಿತು. ಅದಕ್ಕೂ ಕೂಡ ಗಲಾಟೆ ಇಷ್ಟವಿರಲಿಲ್ಲವೇನೋ ಪಾಪ!

ನಿಮ್ಮ ಬಳಿ ಇದೆಯಾ ಈ 10 ರೂ. ಹಳೆಯ ನೋಟು…? ಹಾಗಾದರೆ ನೀವು ಗಳಿಸಬಹುದು ಲಕ್ಷಾಂತರ ರೂ.

ಇದರ ವಿಡಿಯೊವನ್ನು ವಿಕ್ಕಿ ರೀಮಿ ಬೇಕರ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶಾಂತ ಚಿತ್ತವಾಗಿದ್ದರೆ, ಮೃಗಗಳು, ಸರಿಸೃಪಗಳಿಂದಲೂ ಪಾರಾಗಬಹುದು ಎಂಬ ಸಂದೇಶವನ್ನು ಸಾರುತ್ತಿದ್ದಾರೆ. ಅಮೆರಿಕದ ಫ್ಲಾರಿಡಾ ರಾಜ್ಯದ ಸಿಲ್ವರ್‌ ಸ್ಟ್ರಿಂಗ್ಸ್‌ ಸ್ಟೇಟ್‌ ಪಾರ್ಕಿನಲ್ಲಿ ವಿಕ್ಕಿ ದೋಣಿ ವಿಹಾರದಲ್ಲಿದ್ದಾಗ ನಡೆದ ಘಟನೆ ಇದಾಗಿದೆ.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಮೊಸಳೆಯೊಂದು ತನ್ನ ಮೇಲೆಯೇ ಹಾರಾಡುತ್ತಿದ್ದ ಡ್ರೋನ್‌ವೊಂದನ್ನು ಕಚ್ಚಿ ಕೆಡವಿದ್ದ ವಿಡಿಯೊ ಭಾರಿ ವೈರಲ್‌ ಆಗಿತ್ತು. ಅದರಲ್ಲಿ ಮೊಸಳೆಯ ರೌದ್ರಾವತಾರ ಇದ್ದರೆ, ಈ ವಿಡಿಯೊದಲ್ಲಿ ಸೌಮ್ಯ ಸ್ವಭಾವವನ್ನು ಕಾಣಬಹುದಾಗಿದೆ ಎನ್ನುತ್ತಿದ್ದಾರೆ ನೆಟ್ಟಿಗರು.

Gator tried to eat my board. Someone has been feeding him and made him very dangerous. He was a big boy

Posted by Vicki Reamy Baker on Wednesday, September 8, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...