alex Certify ಶಾಕಿಂಗ್​: ಸವಾರನ ನಿಯಂತ್ರಣ ತಪ್ಪಿ ಏಕಾಏಕಿ ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಸವಾರನ ನಿಯಂತ್ರಣ ತಪ್ಪಿ ಏಕಾಏಕಿ ಬಟ್ಟೆ ಅಂಗಡಿ ಒಳಗೆ ನುಗ್ಗಿದ ಬೈಕ್​…..!

ನಿಯಂತ್ರಣ ತಪ್ಪಿದ್ದ ಬೈಕ್​​ ಬಟ್ಟೆ ಅಂಗಡಿಗೆ ನುಗ್ಗಿದ ಪರಿಣಾಮ ಬೈಕ್​ ಸವಾರ ಕೌಂಟರ್​ನೊಳಕ್ಕೆ ಹೋಗಿ ಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಈ ಆಘಾತಕಾರಿ ಘಟನೆಯ ಸಿಸಿ ಟಿವಿ ದೃಶ್ಯಾವಳಿ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಬಟ್ಟೆ ಅಂಗಡಿಯಲ್ಲಿ ಬಟ್ಟೆ ಕೊಳ್ಳಲು ಬಂದಿದ್ದ ಗ್ರಾಹಕರು ಅಂಗಡಿಯೊಳಗೆ ಏಕಾ ಏಕಿ ಬೈಕ್​​ ನುಗ್ಗಿದ್ದನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ.

ಕೌಂಟರ್​ನ ಒಳಗೆ ಓರ್ವ ಯುವತಿ ಹಾಗೂ ಕೌಂಟರ್​ನ ಹೊರಗಡೆ ಮೂವರು ಸ್ಟೂಲ್​ ಮೇಲೆ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ ಏಕಾಏಕಿ ಬಂದ ಬೈಕ್​ ಕೌಂಟರ್​ನ ಹೊರಗೆ ಬಿದ್ದಿದೆ. ಹಾಗೂ ಬೈಕ್​ ಸವಾರ ಕೌಂಟರ್​ ಒಳಕ್ಕೆ ಬಿದ್ದಿದ್ದಾನೆ. ಕೌಂಟರ್​ ಒಳಗಿದ್ದ ಯುವತಿ ಹಾಗೂ ಹೊರಗಿದ್ದ ಮೂವರಿಗೆ ಯಾವುದೇ ಹಾನಿ ಉಂಟಾಗಿಲ್ಲ.

ತೆಲಂಗಾಣದ ಖಮ್ಮಮ್​ ಜಿಲ್ಲೆಯ ರಾವಿಚೆಟ್ಟು ಬಜಾರ್​ನಲ್ಲಿ ಈ ಘಟನೆ ಸಂಭವಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಜಾಜ್​ ಪಲ್ಸರ್​ ಬೈಕ್​ನ್ನು ವಶಕ್ಕೆ ಪಡೆದಿದ್ದಾರೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...