alex Certify Caught on CCTV: ವಾಕ್‌ ಮಾಡುತ್ತಿದ್ದಾಗಲೇ ಬಂದೆರಗಿದ ಜವರಾಯ; ತಾಯಿ-ಮಗಳು ಸೇರಿದಂತೆ ಮೂವರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Caught on CCTV: ವಾಕ್‌ ಮಾಡುತ್ತಿದ್ದಾಗಲೇ ಬಂದೆರಗಿದ ಜವರಾಯ; ತಾಯಿ-ಮಗಳು ಸೇರಿದಂತೆ ಮೂವರ ಸಾವು

ತೆಲಂಗಾಣದ ಹೈದರಾಬಾದ್‌ನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಹೈದರ್‌ಶಕೋಟೆ ಮುಖ್ಯರಸ್ತೆಯಲ್ಲಿ ಮೂವರು ಬೆಳಗಿನ ವಾಕ್‌ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸಿಸಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಕಾರು ಹೆಚ್ಚಿನ ವೇಗದಲ್ಲಿದ್ದೇ ಅಪಘಾತಕ್ಕೆ ಕಾರಣವೆಂದು ಗೊತ್ತಾಗಿದೆ.

ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತರಲ್ಲಿ ತಾಯಿ ಮತ್ತು ಮಗಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...