alex Certify BIG NEWS : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ನಟ ದರ್ಶನ್ ಮನೆ ಬಳಿ ಪೊಲೀಸರ ಸ್ಥಳ ಮಹಜರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ನಟ ದರ್ಶನ್ ಮನೆ ಬಳಿ ಪೊಲೀಸರ ಸ್ಥಳ ಮಹಜರು

ಬೆಂಗಳೂರು : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ದರ್ಶನ್ ಮನೆ ಬಳಿ ಪೊಲೀಸರು ಸ್ಥಳ ಮಹಜರು  ನಡೆಸುತ್ತಿದ್ದಾರೆ.

ದೂರುದಾರೆ ಅಮಿತಾ ಜಿಂದಾಲ್  ನೀಡಿದ ದೂರಿನ ಮೇರೆಗೆ ಆರ್ ಆರ್ ನಗರದಲ್ಲಿರುವ ನಟ ದರ್ಶನ್ ನಿವಾಸದ ಬಳಿ ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ.

ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಮನೆಯ ನಾಯಿ ಕಚ್ಚಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರುದಾರ ಅಮಿತಾ ಜಿಂದಾಲ್ ಅವರು ಕಳೆದ ಅಕ್ಟೋಬರ್ 28 ರಂದು ಕಾರ್ಯಕ್ರಮವೊಂದಕ್ಕೆ ತೆರಳುವ ವೇಳೆ ನಟ ದರ್ಶನ್ ಅವರ ಮನೆಯ ಎದುರಿನ ಖಾಲಿ ಸ್ಥಳದಲ್ಲಿದ್ದ ತಮ್ಮ ಕಾರು ನಿಲ್ಲಿಸಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಕಾರು ತೆಗೆಯಲು ಬಂದಾಗ ಮೂರು ನಾಯಿಗಳ ಪೈಕಿ ಎರಡನ್ನು ಕಟ್ಟಲಾಗಿತ್ತು. ಒಂದು ನಾಯಿ ದಾಳಿ ನಡೆಸಿದೆ ಎಂದು ದೂರು ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...