alex Certify ದೊಡ್ಡ ಅವಘಡದಿಂದ ಸ್ವಲ್ಪದರಲ್ಲೇ ಬಚಾವಾದ ಕಾರು ಚಾಲಕ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೊಡ್ಡ ಅವಘಡದಿಂದ ಸ್ವಲ್ಪದರಲ್ಲೇ ಬಚಾವಾದ ಕಾರು ಚಾಲಕ; ವಿಡಿಯೋ ವೈರಲ್

ಚೀನಾದಲ್ಲಿ ನಡೆದ ಈ ಘಟನೆ ಹಾಲಿವುಡ್​ ಸಿನಿಮಾದ ದೃಶ್ಯದಂತೆಯೇ ಕಾಣಿಸುತ್ತದೆ. ಚೀನಾದ ನೈಋತ್ಯ ಸಿಚುವಾನ್​ ಪ್ರಾಂತ್ಯದಲ್ಲಿ ಕಾರು ಚಾಲಕನು ಭಯಾನಕ ಭೂಕುಸಿತವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾನೆ.

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹೆದ್ದಾರಿಯಲ್ಲಿ ಪರ್ವತವೊಂದು ಕುಸಿದು, ಅದರ ನಡುವೆ ಕಾರು ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೊನೆಯಲ್ಲಿ ಅವಶೇಷ ಕಾಣಿಸುತ್ತದೆ. ಆರಂಭದಲ್ಲಿ ಕಾರು ಸುರಂಗದಿಂದ ವೇಗವಾಗಿ ದಾಟಿ ಹೋಗುವುದನ್ನು ಕಾಣಬಹುದು.

ಕಾರು ಆ ಸ್ಥಳ ದಾಟುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಮಣ್ಣಿನ ರಾಶಿ ಜರಿದು ಆಕಾಶದೆತ್ತರಕ್ಕೆ ಧೂಳು ಏಳುತ್ತದೆ. ಜುಲೈ 5ರಂದು ಸಂಭವಿಸಿದ ಘಟನೆಯ ವಿಡಿಯೊ ನೋಡುಗರನ್ನು ಅಚ್ಚರಿಗೆ ದೂಡಿದೆ.

ಭೂ ಕುಸಿತದಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂಬ ಶೀರ್ಷಿಕೆಯೊಂದಿಗೆ ಆ ವಿಡಿಯೋ ಕ್ಲಿಪ್​ ಅನ್ನು ಹಂಚಿಕೊಳ್ಳಲಾಗಿದೆ. ಈ ಘಟನೆಯು ಕಳೆದ ಕೆಲವು ವಾರಗಳಿಂದ ಚೀನಾ ಎದುರಿಸುತ್ತಿರುವ ಕೆಟ್ಟ ಹವಾಮಾನದ ಪರಿಣಾಮವಾಗಿರಬಹುದು ಎಂದು ಅಕ್ಯುವೆದರ್​ ವರದಿ ಮಾಡಿದೆ.

— NowThis (@nowthisnews) July 10, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...