alex Certify ಝೀಬ್ರಾ ಕ್ರಾಸಿಂಗ್​ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್: ಅಪಘಾತದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಝೀಬ್ರಾ ಕ್ರಾಸಿಂಗ್​ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಟ್ರಕ್: ಅಪಘಾತದ ವಿಡಿಯೋ ವೈರಲ್​

ಜೀಬ್ರಾ ಕ್ರಾಸಿಂಗ್​ನಲ್ಲಿ ನಿಲ್ಲಿಸಿದ್ದ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಭೀಕರ ದೃಶ್ಯವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರೆಡ್ಡಿಟ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಈ ಭೀಕರ ದೃಶ್ಯಾವಳಿಯು ಸೆರೆಯಾಗಿದೆ. ವಿಡಿಯೋದಲ್ಲಿ ಝೀಬ್ರಾ ಕ್ರಾಸಿಂಗ್​ನಲ್ಲಿ ಕಾರು ನಿಂತಿರೋದನ್ನ ಕಾಣಬಹುದಾಗಿದೆ. ಹಿಂದೆಯೇ ಒಂದು ಟ್ರಕ್​ ಹಾಗೂ ಬಸ್​ ಬರುತ್ತಿರೋದನ್ನು ಕಾಣಬಹುದಾಗಿದೆ. ಟ್ರಕ್​​ ನಿಂತ ಬಳಿಕ ಹಿಂಬದಿಯಿಂದ ಬಸ್​ ಟ್ರಕ್​ನ್ನು ಗುದ್ದಿದೆ. ಪರಿಣಾಮ ಟ್ರಕ್​ ಕಾರಿಗೆ ಡಿಕ್ಕಿ ಹೊಡೆದಿದೆ.

ಟ್ರಕ್​ ಕಾರಿಗೆ ಡಿಕ್ಕಿದ ರಭಸಕ್ಕೆ ಕಾರು ಯರ್ರಾಬಿರ್ರಿ ಚಲಿಸಲು ಆರಂಭಿಸಿದೆ. ಹೇಗೋ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಝೀಬ್ರಾ ಲೈನ್​ನಲ್ಲಿ ಕಾರು ನಿಲ್ಲಿಸಿದ್ರೆ ಅದರ ಪರಿಣಾಮ ಹೀಗಿರುತ್ತೆ ನೋಡಿ ಅಂತಾ ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇದೇ ಕಾರಣಕ್ಕಾಗಿಯೇ ನಾನು ಸಿಗ್ನಲ್​ ಲೈಟ್​ ಹಳದಿ ಬಣ್ಣದಲ್ಲಿದ್ದಾಗ ಕಾರು ನಿಲ್ಲಿಸಲು ಹೆದರುತ್ತೇನೆ. ಯಾವ ಚಾಲಕ ಧಾವಿಸಿ ಬಂದು ನಮ್ಮ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾನೋ ಎಂಬುದೇ ಅರ್ಥವಾಗೋದಿಲ್ಲ ಎಂದು ರೆಡಿಟ್​ ಬಳಕೆದಾರರು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...