alex Certify ಬೆಳ್ಳಂಬೆಳಗ್ಗೆ ಅಪಘಾತ: ಕ್ಯಾಂಟರ್ ಹರಿದು ಕೆಲಸಕ್ಕೆ ತೆರಳುತ್ತಿದ್ದ ಪೌರ ಕಾರ್ಮಿಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳ್ಳಂಬೆಳಗ್ಗೆ ಅಪಘಾತ: ಕ್ಯಾಂಟರ್ ಹರಿದು ಕೆಲಸಕ್ಕೆ ತೆರಳುತ್ತಿದ್ದ ಪೌರ ಕಾರ್ಮಿಕ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಪೌರಕಾರ್ಮಿಕನ ತಲೆ ಮೇಲೆ ಕ್ಯಾಂಟರ್ ಹರಿದಿದೆ. ಪೌರಕಾರ್ಮಿಕ ಗಂಗಾಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಟಿ. ದಾಸರಹಳ್ಳಿಯ ಕೆರೆ ರಸ್ತೆಯಲ್ಲಿ ಘಟನೆ ನಡೆದಿದೆ. ಅಪಘಾತದ ಬಳಿಕ ಸ್ಥಳದಲ್ಲೇ ಕ್ಯಾಂಟರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.

ಗಂಗಾಧರ್ ಕೆಲಸದ ಸ್ಥಳದಲ್ಲಿದ್ದ ವೇಳೆ ಅತಿವೇಗವಾಗಿ ಕ್ಯಾಂಟರ್ ಚಾಲನೆ ಮಾಡಿಕೊಂಡು ಬಂದ ಚಾಲಕ ಡಿಕ್ಕಿ ಹೊಡೆಸಿದ್ದಾನೆ. ಇದರಿಂದಾಗಿ ಕೆಳಗೆ ಬಿದ್ದ ಗಂಗಾಧರ್ ತಲೆ ಮೇಲೆಯೇ ಕ್ಯಾಂಟರ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕ್ಯಾಂಟರ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...