alex Certify ಜೂಮ್ ಕಾನ್ಫರೆನ್ಸ್ ವೇಳೆ ಮೂತ್ರ ವಿಸರ್ಜನೆ ಮಾಡಿದ ಎಂಪಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂಮ್ ಕಾನ್ಫರೆನ್ಸ್ ವೇಳೆ ಮೂತ್ರ ವಿಸರ್ಜನೆ ಮಾಡಿದ ಎಂಪಿ..!

ಜೂಮ್ ಕಾನ್ಫರೆನ್ಸ್ ವೇಳೆ ಬೆತ್ತಲಾಗಿ ನಿಂತಿದ್ದ ಕೆನಡಾದ ಲಿಬರಲ್ ಸಂಸದ ವಿಲಿಯಂ ಅಮೋಸ್ ಮತ್ತೊಮ್ಮೆ ಮಿತಿ ಮೀರಿದ್ದಾರೆ. ಕ್ಯಾಮರಾ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಜೂಮ್ ಮೀಟಿಂಗ್ ವೇಳೆ ಮೂತ್ರ ವಿಸರ್ಜನೆ ಮಾಡಿರುವುದು ಕಂಡು ಬಂದಿದೆ. ಇದು ಮುಜುಗರಕ್ಕೆ ಕಾರಣವಾಗಿದೆ.

ಬೆತ್ತಲಾಗಿದ್ದ ಸಂದರ್ಭದಲ್ಲೂ ಕ್ಷಮೆ ಕೇಳಿದ್ದ ವಿಲಿಯಂ ಅಮೋಸ್ ಈಗ ಮತ್ತೆ ಕ್ಷಮೆ ಕೋರಿದ್ದಾರೆ. ಟ್ವಿಟರ್ ನಲ್ಲಿ ಕ್ಷಮೆ ಕೋರಿದ್ದಾರೆ. ಕಳೆದ ರಾತ್ರಿ, ಹೌಸ್ ಆಫ್ ಕಾಮನ್ಸ್ ನ ಸಭೆಗೆ ಹಾಜರಾಗುವಾಗ, ನಾನು ಮುಜುಗರದ ಕೆಲಸ ಮಾಡಿದ್ದೇನೆ. ಜೂಮ್ ಸಭೆಯಲ್ಲಿ  ಮೂತ್ರ ವಿಸರ್ಜನೆ ಮಾಡಿದ್ದೇನೆ. ನಂತ್ರ ನನಗೆ ಕ್ಯಾಮರಾ ಆನ್ ಇರುವುದು ನೆನಪಾಗಿದೆ. ನನ್ನ ಈ ಕೃತ್ಯದ ಬಗ್ಗೆ ನನಗೆ ತುಂಬಾ ನಾಚಿಕೆಯಾಗಿದೆ. ನಾನು ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.

ತಮ್ಮ ಟೇಬಲ್ ಬಳಿ ಫೋನ್ ನಲ್ಲಿ ಮಾತನಾಡ್ತಿದ್ದ ವಿಲಿಯಂ, ಕಾಫಿ ಕಪ್ ನಲ್ಲಿ ಮೂತ್ರ ವಿಸರ್ಜನೆ ಮಾಡುವ ಪ್ರಯತ್ನ ನಡೆಸಿದ್ದಾರೆಂದು ʼದಿ ಗಾರ್ಡಿಯನ್ʼ ವರದಿ ಮಾಡಿದೆ. ವಿರೋಧ ಪಕ್ಷಗಳು ವಿಲಿಯಂ ಕೆಲಸವನ್ನು ಖಂಡಿಸಿವೆ. ಇದು ತಿಳಿಯದೇ ಮಾಡಿದ ಕೆಲಸವೇ ಎಂದು ಪ್ರಶ್ನೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...