alex Certify ಭಾರತದಿಂದ ನಮ್ಮ ದೇಶಕ್ಕೆ ಬರಲು ಪರ್ಯಾಯ ಮಾರ್ಗ ಹುಡುಕಿಕೊಳ್ಳಿ ಎಂದ ಕೆನಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಿಂದ ನಮ್ಮ ದೇಶಕ್ಕೆ ಬರಲು ಪರ್ಯಾಯ ಮಾರ್ಗ ಹುಡುಕಿಕೊಳ್ಳಿ ಎಂದ ಕೆನಡಾ

ಭಾರತದಿಂದ ಬರುವ ವಿಮಾನಗಳಿಗೆ ಕೆನಡಾ ಜುಲೈ 21ರವರೆಗೂ ನಿರ್ಬಂಧ ಮುಂದುವರಿಸಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನ ಗಮನದಲ್ಲಿಟ್ಟುಕೊಂಡು ಕೆನಡಾ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಭಾರತದಿಂದ ಕೆನಡಾಗೆ ಪ್ರಯಾಣಿಸಬೇಕೆಂದುಕೊಂಡವರು ಪಯಾರ್ಯ ಮಾರ್ಗವನ್ನ ಹುಡುಕಬೇಕಾದ ಅನಿವಾರ್ಯತೆ ಇದೆ. ಭಾರತದ ಕೊರೊನಾ ಪರೀಕ್ಷಾ ವರದಿಯನ್ನ ಕೆನಡಾದಲ್ಲಿ ಮಾನ್ಯ ಮಾಡದ ಕಾರಣದಿಂದಾಗಿ ಪ್ರಯಾಣಿಕರು ಬೇರೆ ದೇಶಕ್ಕೆ ಹೋಗಿ ಅಲ್ಲಿಂದ ಕೆನಡಾಗೆ ತೆರಳಬೇಕಾಗುತ್ತದೆ.

ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದವರು ಭಾರತದಿಂದ ಕೆನಡಾಗೆ ಪ್ರಯಾಣಿಸಬೇಕು ಎಂದು ಇಚ್ಛಿಸಿದಲ್ಲಿ ಅವರು ಮೊದಲು ಮೂರನೇ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಬೇಕು. ಹಾಗೂ ಅಲ್ಲಿ ಕೊರೊನಾ ಪರೀಕ್ಷಾ ವರದಿಯನ್ನ ಪಡೆಯಬೇಕು. ಮತ್ತು 14 ದಿನಗಳ ಕಾಲ ಆ ಮೂರನೇ ರಾಷ್ಟ್ರದಲ್ಲಿ ಕ್ವಾರಂಟೈನ್​ ಅವಧಿ ಪೂರೈಸಿ ಬಳಿಕ ಕೆನಡಾಗೆ ಪ್ರಯಾಣ ಬೆಳೆಸಬೇಕು ಎಂದು ಹೇಳಿದೆ.

ಭಾರತದಿಂದ ಕೆನಡಾಗೆ ಪ್ರಯಾಣ ಬೆಳೆಸುವ ಬಗ್ಗೆ ಪ್ರಯಾಣಿಕರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಲಫ್ತಾಸಾನಾ ವಿಮಾನಯಾನ ಸಂಸ್ಥೆ, ಕೆನಡಾ ಸಾರಿಗೆ ಸಚಿವಾಲಯ ಭಾರತದಲ್ಲಿ ನಡೆಸಲಾಗುವ ಕೊರೊನಾ ಪರೀಕ್ಷಾ ವರದಿಯನ್ನ ಮಾನ್ಯ ಮಾಡುತ್ತಿಲ್ಲ. ಹೀಗಾಗಿ ಭಾರತದಿಂದ ಕೆನಡಾಗೆ ನೇರವಾಗಿ ಪ್ರಯಾಣ ಬೆಳೆಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...