alex Certify ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎರಡೂ ಡೋಸ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ

ವಿಶ್ವದಾದ್ಯಂತ ಕೊರೊನಾ ಭಯ ಕಡಿಮೆಯಾಗಿಲ್ಲ. ಕೊರೊನಾ ಮೂರನೇ ಅಲೆ, ಡೆಲ್ಟಾ ಪ್ಲಸ್ ಜನರ ನಿದ್ರೆಗೆಡಿಸಿದೆ. ಕೊರೊನಾ ಯುದ್ಧದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಎಲ್ಲ ದೇಶಗಳಲ್ಲಿ ಕೊರೊನಾ ಲಸಿಕೆ ನೀಡಲಾಗ್ತಿದೆ. ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಖುಷಿ ಸುದ್ದಿಯೊಂದನ್ನು ತಜ್ಞರು ನೀಡಿದ್ದಾರೆ.

ಕೊರೊನಾ ಎರಡೂ ಡೋಸ್ ಪಡೆದವರಿಗೆ ಕೊರೊನಾ ಗಂಭೀರ ಸಮಸ್ಯೆಯಿಂದ ಮುಕ್ತಿ ಸಿಗುವ ಜೊತೆಗೆ ದೀರ್ಘ ಕೊರೊನಾ ಲಕ್ಷಣಗಳಿಂದ ಮುಕ್ತಿ ಸಿಗಲಿದೆ. ಕೊರೊನಾ ನೆಗೆಟಿವ್ ಬಂದ ನಂತ್ರವೂ ಕಾಡುವ ಸಮಸ್ಯೆಗೆ ದೀರ್ಘ ಕೊರೊನಾ ಲಕ್ಷಣ ಎನ್ನಲಾಗುತ್ತದೆ. 200ಕ್ಕೂ ಹೆಚ್ಚು ಸಮಸ್ಯೆ ಇದ್ರಲ್ಲಿ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೊರೊನಾದಿಂದಾಗಿ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕೆಲವು ಸಮಸ್ಯೆ ಎದುರಾಗುತ್ತದೆ. ತೀವ್ರ ಆಯಾಸ, ದೌರ್ಬಲ್ಯ ಮತ್ತು ಕಾಲುಗಳ ನೋವು ಸಾಮಾನ್ಯವಾಗಿರುತ್ತದೆ. ಸಂಪೂರ್ಣ ವಿಶ್ರಾಂತಿಯ ಅಗತ್ಯವಿರುತ್ತದೆ. ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ.

ದೀರ್ಘ ಕೊರೊನಾ ಲಕ್ಷಣದ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಅದ್ರಲ್ಲಿ ಆಸ್ಪತ್ರೆಗೆ ದಾಖಲಾದ 66 ಮಂದಿಯ ಅಧ್ಯಯನ ನಡೆಸಲಾಗಿದೆ. ಅದ್ರಲ್ಲಿ 44 ಮಂದಿ ಲಸಿಕೆ ಪಡೆದಿದ್ದರೆ ಮತ್ತೆ 22 ಮಂದಿ ಲಸಿಕೆ ಪಡೆದಿರಲಿಲ್ಲ. ಲಸಿಕೆ ಪಡೆದವರಲ್ಲಿ ರೋಗಲಕ್ಷಣಗಳಲ್ಲಿ ಇಳಿಕೆ ಮತ್ತು ದೀರ್ಘ ಕೋವಿಡ್‌ನ ರೋಗಲಕ್ಷಣಗಳಲ್ಲಿ ತ್ವರಿತ ಸುಧಾರಣೆ ಕಂಡುಬಂದಿತ್ತು. ಇದರ ಆಧಾರದ ಮೇಲೆ ಕೊರೊನಾ ಲಸಿಕೆ, ದೀರ್ಘ ಕೋವಿಡ್ ಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...