alex Certify ಸಮುದ್ರದ ಮಧ್ಯಭಾಗದಲ್ಲಿ ತೇಲಿದ ಮನೆ; ತಲೆಯಲ್ಲಿ ಹುಳಬಿಟ್ಟುಕೊಂಡ ನೆಟ್ಟಿಗರು | Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದ ಮಧ್ಯಭಾಗದಲ್ಲಿ ತೇಲಿದ ಮನೆ; ತಲೆಯಲ್ಲಿ ಹುಳಬಿಟ್ಟುಕೊಂಡ ನೆಟ್ಟಿಗರು | Watch Video

ಹೌಸ್​ಬೋಟ್​ಗಳ ಪರಿಕಲ್ಪನೆಯು ಬಹಳ ಹಿಂದಿನ ಕಾಲದಿಂದಲೂ ಇದೆ. ಪ್ರಾಚೀನ ಮತ್ತು ಮಧ್ಯಕಾಲೀನ ಕಾಲದಿಂದಲೂ ಜನರು ಸಂಪತ್ತು, ಚಿನ್ನ ಹಾಗೂ ಹೊಸ ದೇಶಗಳ ಅನ್ವೇಷಣೆಯಲ್ಲಿ ನೌಕಾಯಾನ ಮಾಡುತ್ತಿದ್ದರು.

ಆದರೆ ಈಗೀಗ ತೆಲುವ ಮನೆಗಳು ಅಭಿವೃದ್ಧಿಗೊಂಡಿವೆ. ಇತ್ತೀಚಿಗೆ ಸೋಶಿಯಲ್​ ಮೀಡಿಯಾದಲ್ಲಿ ಸಮುದ್ರದಲ್ಲೊಂದು ತೇಲುತ್ತಿರುವ ಮನೆ ಕಾಣಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಮುದ್ರದಲ್ಲಿ ಮಧ್ಯಮ ಗಾತ್ರದ ಹಡಗಿನ ಮೇಲೆ ಚಲಿಸುತ್ತಿದ್ದ ನಾವಿಕರ ಕಣ್ಣಿಗೆ ಈ ತೇಲುವ ಮನೆ ಬಿದ್ದಿದೆ.

ಎಕ್ಸ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಇದೊಂದು ಅತ್ಯಂತ ವಿಚಿತ್ರವಾದ ಸನ್ನಿವೇಶದಂತೆ ಗೋಚರವಾಗುತ್ತಿದೆ. ಒಂದು ಮನೆ ಸಮುದ್ರದಲ್ಲಿ ತೇಲಲು ಹೇಗೆ ಸಾಧ್ಯ..? ಸಮುದ್ರದಲ್ಲಿ ಮನೆ ಮುಳುಗಿ ಹೋಗಬಹುದು ಅಥವಾ ಅಲೆಗಳ ರಭಸಕ್ಕೆ ನಾಶವಾಗಿ ಹೋಗಬಹುದು. ಆದರೆ ಈ ಮನೆ ಅದೇಗೆ ತೇಲುತ್ತಿದೆ ಅಂತಾ ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಅನೇಕರು ಈ ವಿಡಿಯೋಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಈಗಾಗಲೇ 2 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.

— Wow Terrifying (@WowTerrifying) October 28, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...