alex Certify ಸಹೋದರ-ಸಹೋದರಿಯ ದೈಹಿಕ ಸಂಬಂಧ ಸಾಧ್ಯವೇ ? ವಿದ್ಯಾರ್ಥಿಗಳಿಗೆ ಹೀಗೊಂದು ಅಶ್ಲೀಲ ಪ್ರಶ್ನೆ ಕೇಳಿದ ಪಾಕ್‌ ವಿವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರ-ಸಹೋದರಿಯ ದೈಹಿಕ ಸಂಬಂಧ ಸಾಧ್ಯವೇ ? ವಿದ್ಯಾರ್ಥಿಗಳಿಗೆ ಹೀಗೊಂದು ಅಶ್ಲೀಲ ಪ್ರಶ್ನೆ ಕೇಳಿದ ಪಾಕ್‌ ವಿವಿ

ಅಣ್ಣ ಮತ್ತು ತಂಗಿ ನಡುವೆ ಲೈಂಗಿಕ ಸಂಬಂಧ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ? ಈ ರೀತಿ ಪ್ರಶ್ನೆ ಏನಾದ್ರೂ ನಿಮ್ಮ ಮುಂದೆ ಇಟ್ಟರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಪ್ರಶ್ನೆ ಕೇಳಿದವರಿಗೆ ಹೊಡದೇ ಹಾಕಿಬಿಡ್ತಿರೋ ಏನೋ ಅಲ್ವಾ ? ಇಂತಹ ಅಸಹ್ಯಕರ ಪ್ರಶ್ನೆ ಕೇಳಿದ್ದಾದ್ರೂ ಯಾರೂ ಗೊತ್ತಾ? ಪಾಕಿಸ್ತಾನದ ವಿಶ್ವವಿದ್ಯಾಲಯ. ಈ ಪ್ರಶ್ನೆ ಇರುವ ಪತ್ರಿಕೆ ವೈರಲ್ ಆಗಿದ್ದು, ಪಾಕಿಸ್ತಾನ್ ವಿಶ್ವವಿದ್ಯಾಲಯಕ್ಕೆ ಹಾಕದಿರುವ ಶಾಪವೇ ಇಲ್ಲ.

ಇಸ್ಲಾಮಾಬಾದ್ ಮೂಲದ COMSATS ವಿಶ್ವವಿದ್ಯಾನಿಲಯದ ಪ್ರಶ್ನೆ ಪತ್ರಿಕೆಯಲ್ಲಿ ಈ “ಅಶ್ಲೀಲ ಪ್ರಶ್ನೆ” ಯನ್ನು ಕೇಳಲಾಗಿದೆ. ಈ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಮುಖ್ಯಸ್ಥರ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಅಷ್ಟಕ್ಕೂ ಪಾಕಿಸ್ತಾನ ಯೂನಿವರ್ಸಿಟಿ ಪೇಪರ್‌ನ ಪ್ರಶ್ನೆಯಲ್ಲಿ ಕೇಳಲಾದ ಪ್ರಶ್ನೆ ಹೀಗಿದೆ- ಸಹೋದರ-ಸಹೋದರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ’ ಎನ್ನುವುದರ ಬಗ್ಗೆ 300 ಪದಗಳ ಪ್ರಬಂಧ ಬರೆಯಿರಿ ಎಂದು ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆ ಓದಿದಾಕ್ಷಣ ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ. ವಿದ್ಯಾರ್ಥಿಯೊಬ್ಬ ಈ ಪ್ರಶ್ನೆಯ ಫೋಟೋ ತೆಗೆದುಕೊಂಡಿದ್ದಾನೆ.

ಟ್ವಿಟರ್‌ನಲ್ಲಿ ಈ ಪ್ರಶ್ನೆ ಪತ್ರಿಕೆಯನ್ನ ಪೋಸ್ಟ್ ಮಾಡಲಾಗಿದೆ. ಈ ಪ್ರಶ್ನೆ ಪತ್ರಿಕೆ ಓದಿದವರೆಲ್ಲರೂ ವಿಶ್ವವಿದ್ಯಾಲಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಇಷ್ಟು ಕೊಳಕು ಪ್ರಶ್ನೆ ಕೇಳಿದ ಆ ಮೂರ್ಖನನ್ನು ವಜಾ ಮಾಡಿದರೆ ಸಾಕೆ? ವಿಶ್ವವಿದ್ಯಾನಿಲಯದ ಉನ್ನತಾಧಿಕಾರಿಗಳಿಗೆ ಏನು ನಡೆಯುತ್ತಿದೆ ಎಂದು ತಿಳಿದಿಲ್ಲವೇ? ಆ ವಿಶ್ವವಿದ್ಯಾಲಯವನ್ನೇ ಬಂದ್ ಮಾಡಬೇಕು’ ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಕೇಳಿದ ಶಿಕ್ಷಕರನ್ನು ಪ್ರೊಫೆಸರ್ ಖೈರ್ ಉಲ್ ಬಶರ್ ಎಂದು ಗುರುತಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ. ಪ್ರಶ್ನೆಯು ದೊಡ್ಡ ವಿವಾದವನ್ನು ಹುಟ್ಟು ಹಾಕಿದ ನಂತರ, ಮಾಧ್ಯಮ ವರದಿಗಳ ಪ್ರಕಾರ, ಶಿಕ್ಷಕ ನನ್ನ ವಿಶ್ವವಿದ್ಯಾಲಯದಿಂದ ವಜಾಗೊಳಿಸಲಾಗಿದೆ.

ಅಲ್ಲದೇ ಈ ರೀತಿಯ ಪ್ರಶ್ನೆ ಪತ್ರಿಕೆ ವೈರಲ್ ಆಗಿತ್ತಿದ್ದಂತೆಯೇ ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.

Is it okay for brother and sister to 'make love?': Islamabad university's question paper sparks row in Pakistan

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...