alex Certify ಕ್ಯಾಡ್‌ ಬರಿಯ ಹೊಸ ಜಾಹೀರಾತಿನಲ್ಲಿದೆ ಈ ವಿಶೇಷ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಡ್‌ ಬರಿಯ ಹೊಸ ಜಾಹೀರಾತಿನಲ್ಲಿದೆ ಈ ವಿಶೇಷ…!

ಲಿಂಗಾಧಾರಿತವಾಗಿ ಸ್ಥಾಪಿತವಾದ ಮಿಥ್ಯೆಯನ್ನು ಹೋಗಲಾಡಿಸುವ ಪ್ರಯತ್ನವೊಂದರಲ್ಲಿ ಕ್ಯಾಡ್‌ಬರೀಸ್‌ ಹೊಸ ಜಾಹೀರಾತು ಬಿಡುಗಡೆ ಮಾಡಿದ್ದು, ಎಲ್ಲೆಡೆ ಮಿಂಚುತ್ತಿದೆ.

ಕ್ಯಾಡ್‌ಬರೀಸ್‌ನ 2021ರ ಜಾಹೀರಾತಿನಲ್ಲಿ ಮಹಿಳಾ ಕ್ರಿಕೆಟರ್‌ ಆಗಿ ಚೆನ್ನೈ ಮೂಲದ ನಟಿ ಕಾವ್ಯ ರಾಮಚಂದ್ರನ್ ಮಿಂಚಿದ್ದಾರೆ. ಜಾಹೀರಾತಿನಲ್ಲಿ ಕಾವ್ಯಾ ಕ್ರಿಕೆಟ್ ಅಂಗಳದಲ್ಲಿ ಮಿಂಚುತ್ತಿದ್ದರೆ ಆಕೆಯನ್ನು ಬೆಂಬಲಿಸುವ ಪುರುಷ ಅಭಿಮಾನಿಯೊಬ್ಬ ಕ್ಯಾಡ್‌ ಬರೀಸ್ ಚಾಕ್ಲೆಟ್ ಹಿಡಿದು ಸಂಭ್ರಮಿಸುತ್ತಿರುವುದನ್ನು ನೋಡಬಹುದಾಗಿದೆ.

90ರ ದಶಕದಲ್ಲಿ ಇದೇ ಕ್ಯಾಡ್‌ ಬರೀಸ್ ಜಾಹೀರಾತಿನಲ್ಲಿ ಪುರುಷನೊಬ್ಬ ಕ್ರಿಕೆಟ್ ಆಡುತ್ತಿರುವುದಕ್ಕೆ ಪ್ರೋತ್ಸಾಹಿಸುತ್ತಿರುವ ಮಹಿಳಾ ಅಭಿಮಾನಿಯೊಬ್ಬರು ಚಾಕ್ಲೆಟ್ ಹಿಡಿದಿರುವುದನ್ನು ತೋರಲಾಗಿತ್ತು. ಇದೀಗ ಪಾತ್ರಗಳು ಅದಲು ಬದಲಾಗಿವೆ.

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ

1994ರ ಜಾಹೀರಾತಿನಲ್ಲಿ ಮಾಡೆಲ್ ಶಿಮೋನಾ ರಾಶಿ ಪ್ರೇಕ್ಷಕಿಯಾಗಿ ಕಾಣಿಸಿಕೊಂಡು ಮಿಂಚಿದ್ದರು. ಅದೇ ವರ್ಷ ಜನಿಸಿದ ಕಾವ್ಯಾ ರಾಮಚಂದ್ರನ್‌ಗೆ ಹೊಸ ಜಾಹೀರಾತಿನ ನಿರ್ದೇಶಕ ಶಶಾಂಕ್ ಚತುರ್ವೇದಿ ಹಳೆಯ ಜಾಹೀರಾತಿನ ವಿಡಿಯೋ ಮುಂದಿಟ್ಟು ಇದನ್ನು ತಯಾರು ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಉತ್ತಮ ಸಾಧನೆ ತೋರುತ್ತಿರುವ ಭಾರತೀಯ ವನಿತೆಯರ ಕ್ರಿಕೆಟ್ ತಂಡಕ್ಕೆ ಈ ಜಾಹೀರಾತಿನ ಕಂಟೆಂಟ್‌ ಅರ್ಪಣೆಯಾದಂತೆ ಕಾಣುತ್ತಿದೆ. ಮುಂಬಯಿಯ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಈ ಜಾಹೀರಾತಿನ ಶೂಟಿಂಗ್ ಮಾಡಲಾಗಿದೆ.

ಜಾಹೀರಾತಿನಲ್ಲಿ ಹುಕ್ ಶಾಟ್ ಒಂದನ್ನು ಬಾರಿಸುವ ಕಾವ್ಯಾ, ಇದಕ್ಕಾಗಿ ಚೆನ್ನೈನ ಸಾಂಥೋಮ್‌ನಲ್ಲಿ ಮೂರು ದಿನಗಳ ಕಾಲ ಅಭ್ಯಾಸ ಮಾಡಿದ್ದಾರೆ. ಜಾಹೀರಾತಿನ ಶೂಟಿಂಗ್ ವೇಳೆ ಅನ್ಯ ರಾಜ್ಯಗಳಿಗೆ ಸೇರಿದ ಅನೇಕ ಮಹಿಳಾ ಕ್ರಿಕೆಟರ್‌ಗಳು ಕಾವ್ಯ ಸುತ್ತಲೂ ಇದ್ದರು.

ರಾಷ್ಟ್ರ ಮಟ್ಟದ ಈಜುಗಾರ್ತಿಯೂ ಆಗಿರುವ ಕಾವ್ಯಾ 2020ರಲ್ಲಿ ಬರೋಡಾದಲ್ಲಿ ಆಯೋಜಿಸಲಾಗಿದ್ದ ಮಾಸ್ಟರ್ಸ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

Kavya Ramachandran

Kavya in another still from the advertisement

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...