alex Certify ಈ ದಾರಿಯಲ್ಲಿ ಹೋಗಲು ಮಾತ್ರವಲ್ಲ, ವಿಡಿಯೋ ನೋಡಲೂ ಧೈರ್ಯ ಬೇಕು…..! ಚಾಲಕನಿಗೊಂದು ಸಲಾಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದಾರಿಯಲ್ಲಿ ಹೋಗಲು ಮಾತ್ರವಲ್ಲ, ವಿಡಿಯೋ ನೋಡಲೂ ಧೈರ್ಯ ಬೇಕು…..! ಚಾಲಕನಿಗೊಂದು ಸಲಾಂ

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಅಪಾಯಕಾರಿಯಾದ ಬಸ್ ಪ್ರಯಾಣದ ವಿಡಿಯೋ ಒಂದು ವೈರಲ್​ ಆಗಿದ್ದು, ಉಸಿರು ಬಿಗಿ ಹಿಡಿದು ನೋಡುವಂತಿದೆ. ಈ ವಿಡಿಯೋ ನೋಡುವಾಗ ಮೈ ಝುಂ ಎನ್ನಿಸುವಂತಿದೆ.

ಹಿಮಾಚಲ ಪ್ರದೇಶದ ರಿಸ್ಕಿ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಈ ಬಸ್​ ಸಾಗುತ್ತಿದೆ. ಈ ಮಾರ್ಗವನ್ನು ಭಾರತದಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಬಸ್ ಸಮುದ್ರ ಮಟ್ಟದಿಂದ 4,420 ಮೀಟರ್ (1,4500 ಅಡಿ) ಎತ್ತರದಲ್ಲಿರುವ ಸಾಚ್ ಲಾ ಮೂಲಕ ಹಾದುಹೋಗಬೇಕು. ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ (ಎಚ್‌ಆರ್‌ಟಿಸಿ) ಬಸ್ ಚಂಬಾದಿಂದ ಕಿಲ್ಲರ್‌ಗೆ ಹೋಗುತ್ತಿದ್ದು, ಈ ಬಸ್​ ಚಾಲಕನ ಧೈರ್ಯಕ್ಕೆ ಜತೆಗೆ ಇದರಲ್ಲಿ ಪ್ರಯಾಣಿಸಲು ಧೈರ್ಯ ತೋರುವ ಪ್ರಯಾಣಿಕರಿಗೆ ಸಲಾಂ ಎನ್ನಲೇಬೇಕು ಎನ್ನುವಂತಿದೆ.

ಸ್ವಲ್ಪವೇ ಆಯ ತಪ್ಪಿದರೂ ಬಸ್​ನಲ್ಲಿದ್ದವರ ಮೃತದೇಹ ಕೂಡ ಸಿಗದಿರುವಷ್ಟು ಆಳವಾದ ಕಂದಕ ಇಲ್ಲಿದೆ. ಕಿರಿದಾದ ರಸ್ತೆಯಲ್ಲಿ ಬಸ್​ ಸಂಚರಿಸುವುದನ್ನು ನೋಡಿದರೆ ಭಯ ಎನಿಸುವಂತಿದೆ. ಮಧ್ಯೆ ಜಲಪಾತವೂ ಹರಿಯುತ್ತಿದ್ದು, ಅದರ ನಡುವೆಯೂ ಬಸ್​ ಚಲಿಸುತ್ತದೆ.

ನೀವು ಸವಾಲನ್ನು ಆನಂದಿಸುವವರಾಗಿದ್ದರೆ ಮತ್ತು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಹುಡುಕುತ್ತಿದ್ದರೆ, ಇಲ್ಲಿಗೆ ಬನ್ನಿ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್​ ಆಗುತ್ತಿದೆ. ಟ್ರಾವೆಲಿಂಗ್ ಭಾರತ್ ಎಂಬ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿ ಜನರು ಬೆಚ್ಚಿಬೀಳೋದಂತೂ ಗ್ಯಾರೆಂಟಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...