ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿವಾದಾತ್ಮಕ ಟ್ವೀಟ್ ಮಾಡಿದ್ದ ಯುಕೆಯ ಬರ್ಗರ್ ಕಿಂಗ್ ವ್ಯಾಪಕ ಟೀಕೆಗೆ ಗುರಿಯಾದ ಬಳಿಕ ಟ್ವೀಟ್ನ್ನು ಅಳಿಸಿ ಹಾಕಿದ್ದು ಮಾತ್ರವಲ್ಲದೇ ಜನತೆಯ ಬಳಿ ಕ್ಷಮೆಯಾಚಿಸಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬರ್ಗರ್ ಕಿಂಗ್ ಮಹಿಳೆಯರು ಅಡುಗೆ ಮನೆಗೆ ಸೇರಿದವರು ಎಂಬರ್ಥದಲ್ಲಿ ಟ್ವೀಟ್ ಮಾಡಿತ್ತು .
ನಾವು ಕ್ಷಮೆಯಾಚಿಸಿದ ಬಳಿಕ ಟ್ವೀಟ್ ಡಿಲೀಟ್ ಮಾಡೋದಾಗಿ ನಿರ್ಧರಿಸಿದ್ದೇವೆ. ನಾವು ಸಾಕಷ್ಟು ಕಮೆಂಟ್ಗಳನ್ನ ನೋಡಿದ್ದೇವೆ. ನಾವು ನಿಮ್ಮ ಮಾತನ್ನ ಕೇಳ್ತೇವೆ. ನಾವು ಮಾಡಿದ ಮೊದಲ ಟ್ವೀಟ್ ತಪ್ಪಾಗಿದೆ. ಕ್ಷಮೆ ಇರಲಿ. ಯುಕೆಯಲ್ಲಿ 20 ಪ್ರತಿಶತ ಮಾತ್ರ ವೃತ್ತಿಪರ ಬಾಣಸಿಗರು ಇದ್ದಾರೆ ಎಂಬ ಅಂಶವನ್ನ ಗಮನ ಸೆಳೆಯೋದು ಹಾಗೂ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿತ್ತು ಎಂದು ಟ್ವೀಟಾಯಿಸಿದೆ.
https://twitter.com/BigBubbaSZN/status/1369127648517976067