
ತನ್ನ ಹಿಂಡಿನ ಮೇಲೆ ದಾಳಿ ಮಾಡಲು ಬಂದ ಸಿಂಹಿಣಿಯೊಂದರ ಮೇಲೆರಗಿ ಅಟ್ಟಿಸಿಕೊಂಡು ಹೋದ ಎಮ್ಮೆಯೊಂದರ ವಿಡಿಯೋ ವೈರಲ್ ಆಗಿದೆ.
’ವೈಲ್ಡ್ ಅನಿಮಲ್ಸ್ ಕ್ರಿಯೇಷನ್’ ಹೆಸರಿನ ಚಾನೆಲ್ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಈ ಘಟನೆಯ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ವೈರಲ್ ಆಗಿರುವ ಈ ಪೋಸ್ಟ್‌ಗೆ 43,000+ ಲೈಕ್ಸ್ ಸಂದಾಯವಾಗಿದೆ.
ಎಮ್ಮೆಯು ಸಿಂಹಿಣಿಯನ್ನು ತನ್ನ ಕೊಂಬುಗಳಿಂದ ಎರಡು ಬಾರಿ ದಾಳಿ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಎಮ್ಮೆಯ ಜೊತೆಗಾತಿ ಎಮ್ಮೆಯೊಂದು ಅಲ್ಲೇ ಪಕ್ಕದಲ್ಲಿ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಭಾರೀ ಧೈರ್ಯದಿಂದ ಸಿಂಹಿಣಿಯನ್ನು ಎದುರಿಸಿದ ಎಮ್ಮೆ ತನ್ನ ಹಾಗೂ ತನ್ನ ಜೊತೆಗಾತಿಯ ಜೀವ ಕಾಪಾಡಿಕೊಂಡಿದೆ. ಸ್ನೇಹಕ್ಕಾಗಿ ಈ ಮಟ್ಟದಲ್ಲಿ ಹೋರಾಟ ಕೊಟ್ಟ ಎಮ್ಮೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.
https://youtu.be/1oZ48Jp6z-8