alex Certify BSNL ಈ ಪ್ಲಾನ್ ನಲ್ಲಿ 425 ದಿನ ಸಿಗಲಿದೆ 3ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSNL ಈ ಪ್ಲಾನ್ ನಲ್ಲಿ 425 ದಿನ ಸಿಗಲಿದೆ 3ಜಿಬಿ ಡೇಟಾ

ಗ್ರಾಹಕರಿಗೆ ಅಗ್ಗದ ಪ್ಲಾನ್ ನೀಡುವಲ್ಲಿ ಬಿ ಎಸ್ ಎನ್ ಎಲ್ ಹಿಂದೆ ಬಿದ್ದಿಲ್ಲ. ಬಿ ಎಸ್ ಎನ್ ಎಲ್ ಗ್ರಾಹಕರಿಗೆ ಅಗ್ಗದ ಪ್ಲಾನ್ ಜೊತೆ ದೀರ್ಘಾವಧಿ ಪ್ಲಾನ್ ನಲ್ಲಿಯೂ ಭರ್ಜರಿ ಡೇಟಾ ನೀಡುತ್ತದೆ. ಕಂಪನಿ ಪ್ರಿಪೇಯ್ಡ್ ಯೋಜನೆಗಳಲ್ಲಿ 425 ದಿನಗಳ ಮಾನ್ಯತೆ ನೀಡುತ್ತಿದೆ. ಪ್ರಸ್ತುತ ಯಾವುದೇ ಟೆಲಿಕಾಂ ಕಂಪನಿಯು ಬಳಕೆದಾರರಿಗೆ 365 ದಿನಗಳಿಗಿಂತ ಹೆಚ್ಚು ವ್ಯಾಲಿಡಿಟಿಯನ್ನು ನೀಡುತ್ತಿಲ್ಲ.

ಬಿ ಎಸ್ ಎನ್ ಎಲ್ 2399 ರೂಪಾಯಿ ಪ್ರಿಪೇಯ್ಡ್ ಯೋಜನೆಯು 365 ದಿನಗಳ ಮಾನ್ಯತೆಯನ್ನು ನೀಡುತ್ತಿತ್ತು. ಈಗ ಅದನ್ನು 60 ದಿನಗಳವರೆಗೆ ವಿಸ್ತರಿಸಲಾಗಿದೆ. ಈ ಯೋಜನೆ ಲಾಭವನ್ನು ಗ್ರಾಹಕ ಡಿಸೆಂಬರ್ 31ರೊಳಗೆ ಪಡೆಯಬೇಕು.

2399 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ 3ಜಿಬಿ ಡೇಟಾ ಲಭ್ಯವಿದೆ. ಯಾವುದೇ ನೆಟ್‌ವರ್ಕ್‌ಗೆ ದಿನಕ್ಕೆ 100 ಉಚಿತ ಎಸ್ಎಂಎಸ್ ಕಳುಹಿಸಬಹುದು. 425 ದಿನಗಳವರೆಗೆ ಬಿಎಸ್ಎನ್ಎಲ್  ಟ್ಯೂನ್‌ಗಳೊಂದಿಗೆ Eros Now ಗೆ ಪ್ರವೇಶ ಪಡೆಯಬಹುದು.

ದೀರ್ಘಾವಧಿ ಮಾನ್ಯತೆಯ ಬಿ ಎಸ್ ಎನ್ ಎಲ್ ಇನ್ನೊಂದು ಯೋಜನೆ ಬೆಲೆ 1499 ರೂಪಾಯಿ. ಇದು 24ಜಿಬಿ ಡೇಟಾ, ಉಚಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್  ನೀಡುತ್ತದೆ. ಇದು 365 ದಿನಗಳ ಸಿಂಧುತ್ವ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...