alex Certify BSNL ಧಮಾಲ್ ಯೋಜನೆ ಮುಂದೆ ಜಿಯೋ ಪ್ಲಾನ್ ಠುಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BSNL ಧಮಾಲ್ ಯೋಜನೆ ಮುಂದೆ ಜಿಯೋ ಪ್ಲಾನ್ ಠುಸ್

ಅಗ್ಗದ ಬೆಲೆಗೆ ಹೆಚ್ಚು ಡೇಟಾ ಹಾಗೂ ಹೆಚ್ಚು ದಿನಗಳ ಸಿಂಧುತ್ವ ಸಿಗುವ ಯೋಜನೆಯನ್ನು ಟೆಲಿಕಾಂ ಗ್ರಾಹಕರು ಇಷ್ಟಪಡ್ತಾರೆ. ಈ ವಿಷ್ಯ ಟೆಲಿಕಾಂ ಕಂಪನಿಗಳಿಗೆ ತಿಳಿದಿದೆ. ಅನೇಕ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾಕಷ್ಟು ಹೊಸ ಹೊಸ ಪ್ಲಾನ್ ಬಿಡುಗಡೆ ಮಾಡ್ತಿವೆ. ಜಿಯೋ, ಏರ್ಟೆಲ್, ವೊಡಾಫೋನ್-ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಮಧ್ಯೆ ಸಾಕಷ್ಟು ಪೈಪೋಟಿಯಿದೆ. ಈಗ ಬಿಎಸ್ಎನ್ ಎಲ್ ತನ್ನ ಯೋಜನೆಯೊಂದರಲ್ಲಿ ಬದಲಾವಣೆ ಮಾಡಿ, ಜಿಯೋ ಪ್ಲಾನ್ ಗೆ ಟಕ್ಕರ್ ನೀಡಿದೆ.

ಬಿಎಸ್ ಎನ್ಎಲ್, 2,399 ರೂಪಾಯಿ ಯೋಜನೆಯ ಸಿಂಧುತ್ವ ಅವಧಿಯನ್ನು ಹೆಚ್ಚಿಸಿದೆ. ಮೊದಲು ಈ ಯೋಜನೆ ಸಿಂಧುತ್ವ ಒಂದು ವರ್ಷವಾಗಿತ್ತು. ಈಗ ಅದನ್ನು 425 ದಿನಕ್ಕೆ ಏರಿಸಿದೆ. ಈ ಪ್ಲಾನ್ ನಲ್ಲಿ ಪ್ರತಿ ದಿನ 3 ಜಿಬಿ ಡೇಟಾ ಲಭ್ಯವಿದೆ. ಎಲ್ಲ ನೆಟ್ವರ್ಕ್‌ಗೆ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್‌ ಲಭ್ಯವಿದೆ.

ಬಿಎಸ್‌ಎನ್‌ಎಲ್‌ನ ಈ ಯೋಜನೆ, ಜಿಯೋ ಯೋಜನೆಗೆ ಟಕ್ಕರ್ ನೀಡಲಿದೆ. ಜಿಯೋದ 2,399 ರೂಪಾಯಿ ಯೋಜನೆಯು ಕಡಿಮೆ ಮಾನ್ಯತೆ ಮತ್ತು ಕಡಿಮೆ ಡೇಟಾವನ್ನು ನೀಡುತ್ತದೆ. ಈ ಯೋಜನೆಯಲ್ಲಿ 365 ದಿನಗಳವರೆಗೆ ದಿನಕ್ಕೆ 2 GB ಡೇಟಾ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಿಗಲಿದೆ.

ಇನ್ನು ವೊಡಾಫೋನ್-ಐಡಿಯಾ 2,399 ರೂಪಾಯಿ ಪ್ಲಾನ್ ನಲ್ಲಿ  1.5 ಜಿಬಿ ಡೇಟಾ, 365 ದಿನಗಳವರೆಗೆ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್‌ ಲಭ್ಯವಿದೆ. ಈ ಯೋಜನೆಯಲ್ಲಿ ಝೀ5 ನ ಪ್ರೀಮಿಯಂ ಚಂದಾದಾರಿಕೆ, ವಾರಾಂತ್ಯದ ಡೇಟಾ ರೋಲ್ಓವರ್ ಮತ್ತು ರಾತ್ರಿ ಡೇಟಾ ಸೌಲಭ್ಯ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...