alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಗಡಿ ಭದ್ರತಾ ಪಡೆಯಲ್ಲಿದೆ 10ನೇ ತರಗತಿ ಉತ್ತೀರ್ಣರಾದವರಿಗೆ ಹುದ್ದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: ಗಡಿ ಭದ್ರತಾ ಪಡೆಯಲ್ಲಿದೆ 10ನೇ ತರಗತಿ ಉತ್ತೀರ್ಣರಾದವರಿಗೆ ಹುದ್ದೆ

ಗಡಿ ಭದ್ರತಾ ಪಡೆಯು ಆಹ್ವಾನಿಸಿರುವ 7545 ಕಾನ್​ಸ್ಟೇಬಲ್​ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್​ 31 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ssc.nic.in ಗೆ ಭೇಟಿ ನೀಡಬಹುದಾಗಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

ವಯಸ್ಸಿನ ಮಿತಿ : ಆಗಸ್ಟ್​ 1ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರಬಾರದು ಹಾಗೂ 23 ವರ್ಷ ಪ್ರಾಯ ಮೀರಿರಬಾರದು. ಅಂದರೆ ಅಭ್ಯರ್ಥಿಗಳು 1998ರ ಆಗಸ್ಟ್​ 2ಕ್ಕಿಂತ ಮೊದಲು ಜನಿಸಬಾರದು ಹಾಗೂ 2003 ಆಗಸ್ಟ್​1ರ ನಂತರ ಜನಿಸಬಾರದು.
ಅರ್ಜಿ ಸಲ್ಲಿಸುವುದು ಹೇಗೆ..?

ಹಂತ 1: ssc.nic.in ವೆಬ್​ಸೈಟ್​ಗೆ ಭೇಟಿ ನೀಡಿ.

ಹಂತ 2 : ವೆಬ್​ಸೈಟ್​ನ ಹೋಮ್​ಪೇಜ್​ನಲ್ಲಿರುವ ರಿಜಿಸ್ಟ್ರೇಷನ್​ ಲಿಂಕ್​ ಮೇಲೆ ಒತ್ತಿರಿ.

ಹಂತ 3: ಈ ಪೇಜ್​ನಲ್ಲಿ ನಿಮಗೆ ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ಸಲ್ಲಿಸಿ

ಹಂತ 4: ಅಭ್ಯರ್ಥಿಗಳು ಆಯೋಗದ ನೋಂದಣಿ ಸಂಖ್ಯೆ ಹಾಗೂ ಪಾಸವರ್ಡ್​ನ ಸಹಾಯದಿಂದ ಲಾಗಿನ್​​ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹಂತ 5 : ಅರ್ಜಿ ಸಲ್ಲಿಸಿದ ಬಳಿಕ ಸಪ್ಟೆಂಬರ್​ 2ರಂದು ಆನ್​ಲೈನ್ ಶುಲ್ಕ ಪಾವತಿ ಮಾಡಬೇಕು.

ಆಫ್​ಲೈನ್​ನಲ್ಲಿ ಅರ್ಜಿ ಶುಲ್ಕ ಸಲ್ಲಿಸಬಯಸುವವರು ಸೆಪ್ಟೆಂಬರ್​​ 4ರಂದು ಬ್ಯಾಂಕ್​ ಚಲನ್​​ ಜನರೇಟ್​ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...