alex Certify BIG NEWS: ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು BSF ಯೋಧ ಅತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು BSF ಯೋಧ ಅತ್ಮಹತ್ಯೆ

ಶ್ರೀನಗರ: ಗಡಿ ಭದ್ರತಾ ಪಡೆ ಯೋಧರೊಬ್ಬರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ರಾಜೇಂದ್ರ ಯಾದವ್ ಜಮ್ಮು-ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದರು. ಅವರ ಪತ್ನಿ ರಾಜಸ್ಥಾನದ ಧೀರ್ ಪುರ್ ನಲ್ಲಿ ವಾಸವಾಗಿದ್ದರು. ಪತಿ ಪತ್ನಿ ನಡುವೆ ಫೋನ್ ನಲ್ಲಿಯೇ ಜಗಳವಾಗಿತ್ತು. ಮನನೊಂದ ಪಪತ್ನಿ ಅಂಶು ಯಾದವ್ (24) ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಂಗಳವಾರ ಈ ಘಟನೆ ನಡೆದಿತ್ತು.

ಈ ವಿಷಯ ತಿಳಿದ ಯೋಧ ರಾಜೇಂದ್ರ ಯಾದವ್ ಪತ್ನಿ ಸಾವಿನ ಎರಡು ದಿನಗಳಲ್ಲೇ ತಾನೂ ಕೂಡ ತನ್ನ ಸರ್ವಿಸ್ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

ರಾಜೇಂದ್ರ ಯಾದವ್ ಹಾಗೂ ಅಂಶು ಯಾದವ್ 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ರಾಜೇಂದ್ರ ಯಾದವ್ ಪಾರ್ಥಿವ ಶರೀರ ಇಂದು ಜೈಪುರಕೆ ತರುವ ಸಾಧ್ಯತೆ ಇದೆ. ಇಬ್ಬರ ಸಾವಿನ ಬಗ್ಗೆ ತನಿಖೆ ಮುಂದುವರೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...