alex Certify 40 ಸೆಕೆಂಡ್ ನಲ್ಲಿ 47 ಪುಷ್ಅಪ್ಸ್, ಕೊರೆಯುವ ಹಿಮದಲ್ಲು ಬಿಎಸ್ಎಫ್ ಯೋಧರ ಸಾಹಸ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40 ಸೆಕೆಂಡ್ ನಲ್ಲಿ 47 ಪುಷ್ಅಪ್ಸ್, ಕೊರೆಯುವ ಹಿಮದಲ್ಲು ಬಿಎಸ್ಎಫ್ ಯೋಧರ ಸಾಹಸ..!

BSF jawan completes 47 push ups within 40 seconds in biting cold weather.  Viral video - Trending News Newsಯೋಧರ ಸಾಹಸಕ್ಕೆ ಸಾಟಿಯಿಲ್ಲ.‌ ಎಲ್ಲದ್ದಕ್ಕಿಂತ ದೇಶ ಮುಖ್ಯ ಎಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಯೋಧರ ಫಿಟ್ನೆಸ್ ಗು ಸಾಟಿ ಇಲ್ಲ ಎಂದು ಮತ್ತೆ ಸಾಬೀತಾಗಿದೆ‌. ಸಾಮಾನ್ಯ ವಾತಾವರಣದಲ್ಲಿ, ನಮ್ಮ ಮನೆಗಳಲ್ಲೊ, ಜಿಮ್ ಗಳಲ್ಲೊ ಒಂದ್ಹತ್ತು ಪುಷ್ಅಪ್ಸ್ ಮಾಡಲು ನಾವು ಸುಸ್ತು ಹೊಡೆಯುತ್ತೇವೆ. ಆದರೆ ಯೋಧರು ಕೊರೆಯುವ ಹಿಮದಲ್ಲು ತಮ್ಮ ಶಕ್ತಿ ಹಾಗೂ ಸಾಹಸ ಮೆರೆದಿದ್ದಾರೆ.

ಹೌದು, ಗಡಿ ಭದ್ರತಾ ಪಡೆಯು(BSF), ಧೀರ ಯೋಧರ ವಿಡಿಯೋವೊಂದನ್ನ ಹಂಚಿಕೊಂಡಿದೆ. ಇದರಲ್ಲಿ ಯೋಧರು ಕೊರೆಯುವ ಹಿಮದ ನೆಲದಮೇಲೆಯೆ ಪುಷ್ಅಪ್ಸ್ ಮಾಡುತ್ತಿದ್ದಾರೆ. ಅದು ಸಾಮಾನ್ಯವಾಗಿ ಅಲ್ಲಾ 40 ಸೆಕೆಂಡ್ ನಲ್ಲಿ 47 ಪುಷ್ಅಪ್ಸ್ ಮಾಡಿದ್ದಾರೆ. ನಂಬೋಕೆ ಆಗಲ್ಲಾ ಆದ್ರೂ ಇದು ನಿಜ.

ಈ ವಿಡಿಯೋ ನೋಡಿಯೆ ವಾವ್ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದ ಜನರಿಗೆ ಬಿಎಸ್ಎಫ್ ಮತ್ತೊಂದು ಸರ್ಪೈಸ್ ನೀಡಿದೆ. ಕೊರೆಯುವ ಹಿಮದ ನೆಲದ ಮೇಲೆ ಯೋಧರೊಬ್ಬರು ಒಂದೇ ಕೈಯ್ಯಲ್ಲಿ ಪುಷ್ಅಪ್ಸ್ ಮಾಡುತ್ತಿದ್ದಾರೆ. ಅಂತಾ ವಾತಾವರಣದಲ್ಲು ಅವರು ಕೈಗವಸು(ಗ್ಲೌಸ್) ಹಾಕಿಕೊಂಡಿರಲಿಲ್ಲ ಎಂಬುದು ಗಮನಾರ್ಹ‌. ಫಿಟ್ಇಂಡಿಯಾ ಇನಿಷಿಯೇಟಿವ್ ಗೆ ಬೆಂಬಲ‌ ಸೂಚಿಸಲು ಬಿಎಸ್ಎಫ್ ಯೋಧರು ಈ ಸಾಹಸ ಮಾಡಿದ್ದಾರೆ. ಒಟ್ನಲ್ಲಿ ಯೋಧರ ಸಾಹಸ ನೋಡಿರುವ ಜನರು ಇದು ಸಾಧ್ಯವ ಎಂದು ಆಶ್ಚರ್ಯ ಪಡುತ್ತಿರೋದಂತು ಸತ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...