alex Certify ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಫಿಟ್‌ ಆಗಿದ್ದಾರೆ ಬ್ರಿಟನ್‌ ಕಿಂಗ್‌, ವಿಶೇಷವಾಗಿದೆ ಅವರ ಡಯಟ್‌ ಪ್ಲಾನ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಫಿಟ್‌ ಆಗಿದ್ದಾರೆ ಬ್ರಿಟನ್‌ ಕಿಂಗ್‌, ವಿಶೇಷವಾಗಿದೆ ಅವರ ಡಯಟ್‌ ಪ್ಲಾನ್‌ !

ಇತ್ತೀಚೆಗೆ ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಅವರಿಗೆ ಕ್ಯಾನ್ಸರ್ ಇದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿತ್ತು. ಚಾರ್ಲ್ಸ್‌ಗೆ ಈಗ 75 ವರ್ಷ. ಕ್ಯಾನ್ಸರ್‌ ಇರುವುದು ಪತ್ತೆಯಾದ ಬಳಿಕ ಅವರ ಆಹಾರ ಪದ್ಧತಿ, ಫಿಟ್‌ನೆಸ್‌ ರುಟೀನ್‌ ಎಲ್ಲವೂ ಬದಲಾಗಲಿದೆ. ಅವರ ಹೊಸ ಡಯಟ್ ಪ್ಲಾನ್ ಮತ್ತು ಫಿಟ್‌ನೆಸ್ ದಿನಚರಿ ಹೇಗಿದೆ ಅನ್ನೋದನ್ನು ನೋಡೋಣ.

ಬ್ರಿಟನ್‌ನ ಕಿಂಗ್ ಚಾರ್ಲ್ಸ್ ಕುರಿತ ಆಸಕ್ತಿದಾಯಕ ಸಂಗತಿಯೆಂದರೆ ಅವರು ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸ್ತಾರೆ. ಬೆಳಗಿನ ಉಪಹಾರದ ಬಳಿಕ ನೇರವಾಗಿ ರಾತ್ರಿ ಊಟ ಮಾಡುತ್ತಾರೆ. ಮಧ್ಯಾಹ್ನ ಅವರು ಊಟ ಮಾಡುವುದೇ ಇಲ್ಲ. ಊಟ ತಮ್ಮ ಬಿಡುವಿಲ್ಲದ ಜೀವನಕ್ಕೆ ಅಡ್ಡಿಪಡಿಸುತ್ತದೆ ಎನ್ನುತ್ತಾರೆ ಚಾರ್ಲ್ಸ್‌.

ಚಾರ್ಲ್ಸ್ ವಾರಕ್ಕೆ ಎರಡು ಬಾರಿ ಮಾಂಸ, ಮೀನು ಮತ್ತು ಎಲ್ಲಾ ರೀತಿಯ ಡೈರಿ ಉತ್ಪನ್ನಗಳನ್ನು ತಿನ್ನುವುದಿಲ್ಲ. ವಿಶೇಷವಾಗಿ ಚೀಸ್ ಮತ್ತು ಹಾಲಿನಿಂದ ದೂರವಿರುತ್ತಾರೆ. ಆರೋಗ್ಯವಾಗಿರಲು ಹೆಚ್ಚಾಗಿ ಸಸ್ಯ ಆಧಾರಿತ ಆಹಾರವನ್ನು ಸೇವಿಸುತ್ತಾರೆ.

ಚಾರ್ಲ್ಸ್ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. 75ರ ಹರೆಯದಲ್ಲೂ ಫಿಟ್ ಆಗಿದ್ದಾರೆ ಅವರು. ಇದಕ್ಕೆ ಕಾರಣ ಪ್ರತಿದಿನ ಮಾಡುವ 5 ಮೂಲಭೂತ ವ್ಯಾಯಾಮಗಳು. ಇದನ್ನು 5XB ಪ್ಲಾನ್‌ ಎಂದು ಕರೆಯಲಾಗುತ್ತದೆ.

ಜಿಮ್ ಇಲ್ಲದೆಯೂ ಫಿಟ್ ಆಗಿರಬೇಕಾದ ಪೈಲಟ್‌ಗಳಿಗಾಗಿ ಈ ಪ್ಲಾನ್‌ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. 11 ನಿಮಿಷದ ತಾಲೀಮು ಇದು. ಇದರಲ್ಲಿ 2 ನಿಮಿಷಗಳ ಸ್ಟ್ರೆಚಿಂಗ್, 1 ನಿಮಿಷ ಸಿಟ್-ಅಪ್‌ಗಳು, 1 ನಿಮಿಷ ಬೆನ್ನು ಮತ್ತು ಲೆಗ್ ರೈಸ್, 1 ನಿಮಿಷ ಪುಶ್-ಅಪ್‌ಗಳು ಮತ್ತು 6 ನಿಮಿಷಗಳ ರನ್ನಿಂಗ್‌ ಇರುತ್ತದೆ.

5XB ವ್ಯಾಯಾಮದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಎಕ್ಸರ್‌ಸೈಸ್‌ ಮಾಡಬಹುದು. ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ಇಡೀ ದೇಹವನ್ನು ಈ ವ್ಯಾಯಾಮ ಆಕ್ಟಿವ್‌ ಮಾಡುತ್ತದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...