alex Certify ವಿಮಾನ ನಿಲ್ದಾಣದಲ್ಲಿ ಕಾರು ಬಿಟ್ಟು ವಿದೇಶಕ್ಕೆ ತೆರಳಿದ್ದ ದಂಪತಿಗೆ ವಾಪಾಸ್‌ ಬಂದಾಗ ಕಾದಿತ್ತು ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣದಲ್ಲಿ ಕಾರು ಬಿಟ್ಟು ವಿದೇಶಕ್ಕೆ ತೆರಳಿದ್ದ ದಂಪತಿಗೆ ವಾಪಾಸ್‌ ಬಂದಾಗ ಕಾದಿತ್ತು ಶಾಕ್…!

ಸ್ಪೇನ್​ಗೆ ರಜೆ ಸಂದರ್ಭದಲ್ಲಿ ವಿಶ್ರಮಿಸಲು ತೆರಳಿದ್ದ ಬ್ರಿಟಿಷ್​ ದಂಪತಿ ವಾಪನ್​ ತಮ್ಮೂರಿಗೆ ಬಂದಾಗ ಶಾಕಿಂಗ್​ ರೂಪದಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ.

ಗ್ಯಾರಿ ಥಾರ್ಸ್​ಟನ್​ ಮತ್ತು ಕ್ಲೇರ್​ ಬಿಯರ್ಡ್ಸ್​ 13 ದಿನ ಮುರ್ಸಿಯಾಕ್ಕೆ ಹೋಗಲು ಯೋಜಿಸಿದ್ದರು. ಆಗಸ್ಟ್​ 3ರಂದು ವಿಮಾನ ಏರುವ ಮೊದಲು, ಅವರು ತಮ್ಮ ವೋಕ್ಸ್​ ವ್ಯಾಗನ್​ ಗಾಲ್ಫ್​ ಜಿಟಿಐ ಕಾರನ್ನು ಮ್ಯಾಂಚೆಸ್ಟರ್​ ಏರ್​ಪೋರ್ಟ್​ನ ಮೀಟ್​ ಮತ್ತು ಗ್ರೀಟ್​ ಸೇವೆಯಲ್ಲಿ ಇರಿಸಿದರು. ಅವರು ಆಗಸ್ಟ್​ 16ರಂದು ಹಿಂದಿರುಗಿದ ಬಳಿಕ ಪೊಲೀಸರು ವೇಗದ ಚಲಾವಣೆಗಾಗಿ ದಂಡ ಪತ್ರ ಹಿಡಿದು ನಿಂತಿದ್ದರು.

ಆಗಸ್ಟ್​ 10ರ ಪತ್ರದಲ್ಲಿ, 30-ಮಿತಿ ವಲಯದಲ್ಲಿ ಅಲನ್​ ಟ್ಯೂರಿಂಗ್​ ವೇಯಲ್ಲಿ 55 ಕಿಮೀ ವೇಗದಲ್ಲಿ ಅವರ ಕಾರು ಚಲಾಯಿಸಿದ್ದು, ಪೊಲೀಸರ ಕ್ಯಾಮರಾಗೆ ಸೆರೆ ಸಿಕ್ಕಿದೆ. ಈ ಸಂಗತಿಯನ್ನು ಪೊಲೀಸರು ಆ ಜೋಡಿಗೆ ಹೇಳಿದ್ದಾರೆ.

ಇದರ ಜೊತೆಗೆ, ನಂಬರ್​ ಪ್ಲೇಟ್​ನೊಂದಿಗೆ ದಂಪತಿಯ ಬಿಳಿ ಗಾಲ್ಫ್​ ಜಿಟಿಐ ಚಿತ್ರಗಳನ್ನು ಸಹ ಪತ್ರದೊಂದಿಗೆ ಲಗತ್ತಿಸಲಾಗಿದೆ. ಕಾರು ವೇಗವಾಗಿ ಸಂಚಾರವಾಗಿದ್ದನ್ನು ಅದರಲ್ಲಿ ನೋಡಬಹುದು. ಆಘಾತಕಾರಿ ಭಾಗವೆಂದರೆ ಘಟನೆಯು ಆಗಸ್ಟ್​ 5ರಂದು ಸಂಭವಿಸಿದೆ, ಅಂದರೆ ಕಾರಿನ ಮಾಲೀಕರು ಆ ದಿನ ಆ ದೇಶದಲ್ಲೇ ಇರಲಿಲ್ಲ. ತಮ್ಮ ಕಾರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಎರಡು ದಿನಗಳ ಬಳಿಕ ಈ ದಂಡ ಬಿದ್ದಿದೆ.

ದಂಪತಿಗಳು ಸ್ಪೇನ್​ಗೆ ಹೊರಟ ತಕ್ಷಣ ಸೇವಾ ಸಿಬ್ಬಂದಿಯೊಬ್ಬರು ಕಾರನ್ನು ಕಾಂಪೌಂಡ್​ಗೆ ಕೊಂಡೊಯ್ದಿದ್ದರು. ಆ ಕಾರು ಅಲ್ಲಿಯೇ ನಿಂತಿತ್ತು ಎಂದು ಮ್ಯಾಂಚೆಸ್ಟರ್​ ವಿಮಾನ ನಿಲ್ದಾಣದ ಅಧಿಕಾರಿಗಳು ಕೂಡ ಹೇಳಿದ್ದಾರೆ.

ಕಾರು 5ನೇ ತಾರೀಖು ಹೋಗಿದ್ದೆಲ್ಲಿಗೆ ಎಂದು ತನಿಖೆ ಆರಂಭವಾಗಿದೆ. ಸ್ಥಳಿಯ ಮಾಧ್ಯಮಕ್ಕೆ ಪ್ರತಿಕ್ರಿಗೆ ನೀಡಿದ ಗ್ಯಾರಿ ಥಾರ್ನ್​ಟನ್​, ಆಗಸ್ಟ್​ 3ರ ಬುಧವಾರ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣದ ಟರ್ಮಿನಲ್​ 3ಕ್ಕೆ ತಮ್ಮ ಕಾರನ್ನು ತರಲಾಗಿತ್ತು. ಆ ಕಾರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಾರೆ ಎಂದು ನನಗೆ ತಿಳಿದಿತ್ತು. ಕಾರನ್ನು ಒಳ್ಳೆ ರೀತಿಯಲ್ಲಿ ನೋಡಿಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬಯಸಿದ್ದೇವೆ. ಇದು ಕ್ರಿಮಿನಲ್​ ಅಪರಾಧ ಮತ್ತು 30 ವಲಯದಲ್ಲಿ 55ಕಿಮೀ ವೇಗದಲ್ಲಿ ಹೋಗುವುದು ಅತ್ಯಂತ ಅಪಾಯಕಾರಿ ಎಂದು ಗ್ಯಾರಿ ಉಲ್ಲೇಖಿಸಿದ್ದಾರೆ.

ದಂಪತಿಗಳು ಈ ವಿಷಯದಲ್ಲಿ ತಮ್ಮ ಸ್ಪಷ್ಟಿಕರಣವನ್ನು ನೀಡಲು ಗ್ರೇಟರ್​ ಮ್ಯಾಂಚೆಸ್ಟರ್​ ಪೊಲೀಸರನ್ನು ಸಂಪರ್ಕಿಸಿದ್ದಾರೆ ಮತ್ತು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...