alex Certify ಮಗಳ ಸ್ನೇಹಿತೆ ಪ್ರೀತಿಗೆ ಬಿದ್ದ ತಂದೆ..! 25 ವರ್ಷ ವಯಸ್ಸಿನ ಹುಡುಗಿ ಮೇಲೆ ಚಿಗುರಿದ ಪ್ರೇಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಸ್ನೇಹಿತೆ ಪ್ರೀತಿಗೆ ಬಿದ್ದ ತಂದೆ..! 25 ವರ್ಷ ವಯಸ್ಸಿನ ಹುಡುಗಿ ಮೇಲೆ ಚಿಗುರಿದ ಪ್ರೇಮ

ವಿವಾಹೇತರ ಸಂಬಂಧಗಳು ವಿವಾದಕ್ಕೆ ಕಾರಣವಾಗುತ್ತವೆ. ಬ್ರಿಟನ್‌ನಲ್ಲಿ ವಿವಾಹೇತರ ಸಂಬಂಧ ಪತಿ-ಪತ್ನಿ ದೂರವಾಗಲು ಕಾರಣವಾಗಿದೆ. ಇಷ್ಟೇ ಅಲ್ಲ, ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.  ಟಿಕ್‌ಟಾಕ್‌ನಲ್ಲಿ ಹುಡುಗಿಯೊಬ್ಬಳು ತನ್ನ ಕಥೆಯನ್ನು ಹಂಚಿಕೊಂಡಿದ್ದಾಳೆ.

ಯುಕೆ ಮೂಲದ ಡಯಾನಾ @diana.j.t  ಹೆಸರಿನ ಖಾತೆಯಲ್ಲಿ ತನ್ನ ನೋವು ಹಂಚಿಕೊಂಡಿದ್ದಾಲೆ. ಡಯಾನಾ ಕುಟುಂಬ ರೆಸ್ಟೋರೆಂಟ್ ನಡೆಸುತ್ತದೆ. ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಡಯಾನಾ ಸ್ನೇಹಿತೆಯನ್ನು ಡಯಾನಾ ತಂದೆ ಪ್ರೀತಿ ಮಾಡುತ್ತಿದ್ದಾನಂತೆ.

ಡಯಾನಾ ತಾಯಿಗೆ ಪತಿಯ ವಿವಾಹೇತರ ಸಂಬಂಧದ ಬಗ್ಗೆ ಸಂಶಯವಿತ್ತಂತೆ. ಆದ್ರೆ ಯಾರ ಜೊತೆ ಸಂಬಂಧವಿದೆ ಎಂಬುದು ತಿಳಿದಿರಲಿಲ್ಲವಂತೆ. ಡಯಾನಾ ಪತಿ, ವಿವಾಹೇತರ ಸಂಬಂಧ ಹೊಂದಿರುವುದು ಡಯಾನಾ ಸ್ನೇಹಿತೆ ಜೊತೆ ಎಂಬ ವಿಷ್ಯ ಎಲ್ಲರ ಶಾಕ್ ಗೆ ಕಾರಣವಾಗಿದೆ.

ಡಯಾನಾ ತಾಯಿ ಈಗ ವಿಚ್ಛೇದನ ಪಡೆದು ಬೇರೆ ಮನೆಯಲ್ಲಿ ವಾಸವಾಗಿದ್ದಾಳೆ. ಡಯಾನಾ ಸ್ನೇಹಿತೆ ಹಾಗೂ ಡಯಾನಾ ತಂದೆ ಮಧ್ಯೆ ವಯಸ್ಸಿನ ಅಂತರ ಹೆಚ್ಚಿದೆ. 25 ವರ್ಷದ ಹುಡುಗಿಯನ್ನು ಡಯಾನಾ ತಂದೆ ಪ್ರೀತಿಸುತ್ತಿದ್ದಾನೆ.

ತಾಯಿ ಪರಿಸ್ಥಿತಿ ನನಗೆ ನೋವುಂಟು ಮಾಡುತ್ತದೆ ಎಂದು ಡಯಾನಾ ಹೇಳಿದ್ದಾಳೆ. ರೆಸ್ಟೋರೆಂಟ್ ಕೆಲಸವನ್ನೂ ತಾಯಿ ಬಿಟ್ಟಿದ್ದಾಳೆ. 25 ವರ್ಷದ ಹುಡುಗಿಗಾಗಿ ತಂದೆ ನನ್ನ ತಾಯಿ ಜೊತೆಗಿದ್ದ ಸಂಬಂಧ ಕಡಿದುಕೊಂಡಿದ್ದಾನೆಂದು ಡಯಾನಾ ನೋವು ತೋಡಿಕೊಂಡಿದ್ದಾಳೆ. ಡಯಾನಾ ಹಾಗೂ ಆಕೆ ತಂದೆ ಸಂಬಂಧ ಚೆನ್ನಾಗಿದೆಯಂತೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...