alex Certify ಮದುವೆ ದಿನವೇ ಪರೀಕ್ಷೆ ಬರೆದ ವಧು: ತಾಳಿ ಕಟ್ಟಿದ ನಂತರ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನವೇ ಪರೀಕ್ಷೆ ಬರೆದ ವಧು: ತಾಳಿ ಕಟ್ಟಿದ ನಂತರ ಪರೀಕ್ಷಾ ಕೇಂದ್ರಕ್ಕೆ ಬಿಟ್ಟ ವರ

ಶಿವಮೊಗ್ಗ: ಮದುವೆ ದಿನವೇ ವಧು ಪರೀಕ್ಷೆ ಬರೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಭರ್ಮಪ್ಪ ನಗರದ ನಿವಾಸಿ ಸತ್ಯವತಿ ಮದುವೆ ದಿನವೇ ಪರೀಕ್ಷೆ ಬರೆದ ವಧು.

ಚೆನ್ನೈ ಮೂಲದ ಫ್ರಾನ್ಸಿಸ್ ಜೊತೆಗೆ ಸಾಮಾಜಿಕ ಜಾಲತಾಣ ಮೂಲಕ ಪರಿಷಯವಾಗಿದ್ದು, ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಹಿರಿಯರನ್ನು ಒಪ್ಪಿಸಿ ಭಾನುವಾರ ಮನೆಯಲ್ಲಿಯೇ ಸರಳವಾಗಿ ಮದುವೆಯಾಗಿದ್ದಾರೆ.

ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿಯಾಗಿರುವ ಸತ್ಯವತಿ ಮದುವೆ ಮುಗಿದ ಕೂಡಲೇ ಸೀದಾ ಕಮಲಾ ನೆಹರೂ ಕಾಲೇಜಿಗೆ ತೆರಳಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದಾರೆ. ಭಾನುವಾರ ಬೆಳಿಗ್ಗೆ ತಾಳಿ ಕಟ್ಟಿಸಿಕೊಂಡ ಸತ್ಯವತಿಯನ್ನು ವರ ಫ್ರಾನ್ಸಿಸ್ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದಾರೆ. ಪರೀಕ್ಷೆ ಬರೆದ ನಂತರ ಸತ್ಯವತಿ ಮನೆಗೆ ತೆರಳಿದ್ದು, ಮದುವೆಯ ಕಾರ್ಯ ನೆರವೇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...